ಅಧಿವೇಶನದಲ್ಲಿ ಮಾಧ್ಯಮಗಳಿಗೆ ನಿರ್ಬಂಧಕ್ಕೆ ಖಂಡನೆ: ಮೈತ್ರಿ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನ ರದ್ದು ಮಾಡಿದ್ದು ಹೇಯ ಕೃತ್ಯ – ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಕಿಡಿ…

Promotion

ಬೆಂಗಳೂರು,ಅ,10,2019(www.justkannada.in):  ಮೈತ್ರ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನವನ್ನ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ರದ್ಧು ಮಾಡಿದೆ. ಇದು ಹೇಯವಾದ ಕೃತ್ಯ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕಿಡಿಕಾರಿದರು.

ರಾಜ್ಯ ಸರ್ಕಾರದ ವಿರುದ್ದ ಬೆಂಗಳೂರಿನಲ್ಲಿ ಜೆಡಿಎಸ್ ಪ್ರತಿಭಟನೆ ನಡೆಸುತ್ತಿದೆ. ಜೆಡಿಎಸ್ ಕಛೇರಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಗೌರವಾನ್ವಿತ ಮುಖ್ಯಮಂತ್ರಿಗಳು 36 ಸಾವಿರ ಕೋಟಿ ಕೇಳಿದ್ರು. ಆದ್ರೆ 1200 ಕೋಟಿ ಮಾತ್ರ ಕೇಂದ್ರ ಕೊಟ್ಟಿದೆ. ಮೈತ್ರಿ ಸರ್ಕಾರ ಬಿಡುಗಡೆ ಮಾಡಿದ ಅನುಧಾನವನ್ನ ಸಂಪೂರ್ಣವಾಗಿ ರದ್ದು ಮಾಡಿದ್ದಾರೆ. ಇದು ಹೇಯವಾದ ಕೃತ್ಯ ರಾಜ್ಯ ಸರ್ಕಾರದ ವಿರುದ್ದ ನಮ್ಮ ಪಕ್ಷದಿಂದ ಮಾಡುತ್ತಿರುವ ಪ್ರತಿಭಟನೆ ಇದು ಎಂದರು.

ಅಧಿವೇಶನಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದನ್ನ ಖಂಡಿಸಿದ ಮಾಜಿ ಪ್ರಧಾನಿ ಹೆಚ್.ಡಿ ದೇವಗೌಡರು, ಅಧಿವೇಶನ ಕ್ಕೆ ಮಾಧ್ಯಮಗಳನ್ನು ಒಳಗೆ ಬಿಡದೆ ಇರೋದು ಅತ್ಯಂತ ಹೇಯವಾದ ಕೃತ್ಯ. ಇದನ್ನ ನೋಡ್ತಿದ್ರೆ ರಾಜ್ಯಕ್ಕೆ ಏನೋ ಕಾದಿದೆ. ಇದು ಸರಿಯಾದ ರೀತಿಯ ಕ್ರಮ ಅಲ್ಲ. ಇದನ್ನ ನಾನು ಖಂಡಿಸುತ್ತೇನೆ ಪ್ರಜಾಪ್ರಭುತ್ವದಲ್ಲಿ ಈ ರೀತಿಯಲ್ಲಿ ನಡುವಳಿಕೆ ಸರಿಯಲ್ಲ ಎಂದು ಕಿಡಿಕಾರಿದರು.

ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್  ಮನೆ ಮೇಲೆ ಐಟಿ ದಾಳಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ದೇವಗೌಡರು, ಐಟಿ ದಾಳಿ ಇದು ಖಂಡನೀಯ  ಎಂದರು.

Key words: former prime minister- HD devegowda-against-state govrnament-bangalore