ಕರ್ನಾಟಕ ಚಿತ್ರಕಲಾ ಪರಿಷತ್ ನ ಮಾಜಿ ಅಧ್ಯಕ್ಷ ದರ್ಬೆ ಕೃಷ್ಣಾನಂದ ಚೌಟ ನಿಧನ:  ಸಂತಾಪ ಸೂಚಿಸಿದ ಸಚಿವ ಜಿ.ಟಿ ದೇವೇಗೌಡ…

Promotion

ಮೈಸೂರು,ಜೂ,19,2019(www.justkannada.in): ಕರ್ನಾಟಕ ಚಿತ್ರಕಲಾ ಪರಿಷತ್ ನ ಮಾಜಿ ಅಧ್ಯಕ್ಷ ದರ್ಬೆ ಕೃಷ್ಣಾನಂದ ಚೌಟ ನಿಧನರಾಗಿದ್ದು ಅವರ ನಿಧನಕ್ಕೆ  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಸಂತಾಪ ಸೂಚಿಸಿದರು.

ದರ್ಬೆ ಕೃಷ್ಣಾನಂದ ಚೌಟ ಅವರ ನಿಧನವು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ. ಕನ್ನಡದ ಹಿರಿಯ ರಂಗ ಸಂಘಟಕರಾಗಿದ್ದ ಡಿ ಕೆ ಚೌಟ, ಚಿತ್ರಕಲಾ‌ ಪರಿಷತ್ ನಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರಸಂತೆ ಏರ್ಪಡಿಸುವ‌ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಲು ಕಾರಣಕರ್ತರಾಗಿದ್ದರು. ರಂಗನಿರಂತರ ಸಂಸ್ಥೆಯ ಅಧ್ಯಕ್ಷರಾಗಿ ಮತ್ತು ಕಳೆದ‌ ವರ್ಷ ನಡೆದ‌ ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ಅಧ್ಯಕ್ಷರಾಗಿದ್ದರು. ಸ್ವತಃ ಬರಹಗಾರರಾಗಿದ್ದ ಇವರಿಗೆ *ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು ಎಂದು ಹೇಳಿದರು.

ದರ್ಬೆ ಕೃಷ್ಣಾನಂದ ಚೌಟ ಅವರ ಆತ್ಮಕ್ಕೆ ತಾಯಿ ಚಾಮುಂಡೇಶ್ವರಿ ಶಾಂತಿ  ನೀಡಲಿ ಮತ್ತು ಅವರ ಕುಟುಂಬದ ಸದಸ್ಯರಿಗೆ ನೋವು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಸಂತಾಪ ಸೂಚಿಸಿದರು.

Key words: Former President -f Karnataka Chitrakala Parishad -Darbe Krishnananda Chauta -passed away-mysore