ಗುಜರಾತ್ ಗೆ ಇಸ್ರೋ ಸ್ಥಳಾಂತರಿಸದಂತೆ ಪ್ರಧಾನಿ ಮೋದಿಗೆ ಮಾಜಿ ಸಂಸದ ಮುದ್ದಹನುಮೇಗೌಡ ಮನವಿ.

Promotion

ಬೆಂಗಳೂರು,ಡಿಸೆಂಬರ್,8,2021(www.justkannada.in):  ಬೆಂಗಳೂರಿನಲ್ಲಿರುವ ಇಸ್ರೋ ಸಂಸ್ಥೆಯನ್ನ ಗುಜರಾತ್ ಗೆ ಸ್ಥಳಾಂತರಿಸದಂತೆ ಪ್ರಧಾನಿ ನರೆಂದ್ರ ಮೋದಿಗೆ ಮಾಜಿ ಸಂಸದ ಎಸ್.ಪಿ ಮುದ್ದಹನುಮೇಗೌಡ ಮನವಿ ಮಾಡಿದ್ದಾರೆ.

ಈ ಕುರಿತು ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಮುದ್ದಹನುಮೇಗೌಡ, ಇಸ್ರೋ ಸಂಸ್ಥೆ ಗುಜರಾತ್ ಗೆ ಸ್ಥಳಾಂತರಿಸದಂತೆ ಮನವಿ ಮಾಡಿದ್ದಾರೆ. ಅಲ್ಲದೆ ರಾಜ್ಯದ ಎಲ್ಲಾ ಸಂಸದರೂ ಪಕ್ಷಾತೀತವಾಗಿ ಪ್ರಧಾನಿ ಮೋದಿಗೆ ಒತ್ತಾಯ ಮಾಡುವಂತೆ ಮನವಿ ಮಾಡಿದ್ದಾರೆ.

ಇನ್ನು ಇಸ್ರೋ ಸಂಸ್ಥೆಯನ್ನ ಗುಜರಾತ್ ಗೆ ಸ್ಥಳಾಂತರಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ  ಹಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಪ್ರತಿಭಟನೆಗಳೂ ನಡೆಯುತ್ತಿವೆ.

Key words: Former MP –muddahanumegowda- appeals – PM -Modi -not – move -ISRO -Gujarat