ಮಾಜಿ ಶಾಸಕ ಡಾ. ಯತಿಂದ್ರ ಸಿದ್ದರಾಮಯ್ಯ ಅವರಿಗೆ ಮುಂದಿನ ಎಂ.ಪಿ ಚುನಾವಣೆಗೆ ಟಿಕೆಟ್ ನೀಡುವಂತೆ ಆಗ್ರಹ.

Promotion

ಮೈಸೂರು,ಜೂನ್,9,2023(www.justkannada.in): ಮಾಜಿ ಶಾಸಕ ಡಾ ಯತಿಂದ್ರ ಸಿದ್ದರಾಮಯ್ಯ  ಅವರಿಗೆ ಮುಂದಿನ ಲೋಕಸಭಾ ಚುನಾವಣೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ಅಂಚೆ ಚಳುವಳಿ ನಡೆಯಿತು.

ನಗರದ ರಾಮಸ್ವಾಮಿ ವೃತ್ತದಲ್ಲಿ ನಡೆದ ಚಳುವಳಿಯಲ್ಲಿ ಮಾತನಾಡಿದ ಲೋಕೇಶ್ ಪಿಯಾ ಅವರು, ಮಾಜಿ ಶಾಸಕ ಡಾ ಯತಿಂದ್ರ ಸಿದ್ದರಾಮಯ್ಯ ಮುಂದಿನ ಎಂಪಿ ಚುನಾವಣೆ ಟಿಕೆಟ್ ನೀಡಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಅಂಚೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದೇವೆ. ಪ್ರತಾಪ್ ಸಿಂಹ ಸೋಲಿಸಬೇಕೆಂದರೆ ಯತಿಂದ್ರ ಅವರು ಸೂಕ್ತ ವ್ಯಕ್ತಿ.

ಜಾತ್ಯತೀತವಾಗಿ ಎಲ್ಲರೂ ಇಷ್ಟಪಡುವ ವ್ಯಕ್ತಿ. ಜಿಲ್ಲೆಯಲ್ಲೇ ಬೇರೆ ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಲಾಗಲ್ಲ. ಯತಿಂದ್ರ ಸಿದ್ದರಾಮಯ್ಯ ಅವರೇ ಸೂಕ್ತ ವ್ಯಕ್ತಿ. ಸರಳ ವ್ಯಕ್ತಿತ್ವ ಹಾಗೂ ಯುವಕರಾಗಿದ್ದಾರೆ. ಆದ್ದರಿಂದ ಈ ಬಾರಿ ಯತೀಂದ್ರ ಸಿದ್ದರಾಮಯ್ಯ ನವರಿಗೆ ಎಂ.ಪಿ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದರು.

Key words: Former MLA -Yatindra Siddaramaiah –MP election- ticket –demand-mysore