ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯಗೆ ಎಂಎಲ್ ಸಿ ಸ್ಥಾನ ನೀಡುವಂತೆ ಒತ್ತಾಯ.

Promotion

ಮೈಸೂರು,ಜೂನ್,7,2023(www.justkannada.in): ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯಗೆ ಎಂಎಲ್ ಸಿ ಸ್ಥಾನ ನೀಡುವಂತೆ ಕಾಂಗ್ರೆಸ್ ಪದವೀಧರ ಘಟಕದ ಜಿಲ್ಲಾಧ್ಯಕ್ಷ ರಮೇಶ್ ಒತ್ತಾಯ ಮಾಡಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಪದವೀಧರ ಘಟಕದ  ಜಿಲ್ಲಾಧ್ಯಕ್ಷ ರಮೇಶ್, ಯತೀಂದ್ರ ಸಿದ್ದರಾಮಯ್ಯನವರು ಎಂಎಲ್ ಸಿ ಸ್ಥಾನಕ್ಕೆ ಅರ್ಹರು. ಸಿದ್ದರಾಮಯ್ಯರನ್ನ ಸೋಲಿಸಲು ಸ್ವತಃ ಅಮಿತ್ ಶಾ ಸೇರಿ ಬಿಜೆಪಿಯ ಘಟಾನುಘಟಿ ನಾಯಕರೇ ಆಗಮಿಸಿದ್ದರು. ಆದರೆ ಯತೀಂದ್ರ ಸಿದ್ದರಾಮಯ್ಯನವರು ಇಡೀ ಕ್ಷೇತ್ರ ಸಂಚರಿಸಿ ಸಿದ್ದರಾಮಯ್ಯರ ಗೆಲುವಿಗೆ ಶ್ರಮಿಸಿದ್ದಾರೆ. 5 ವರ್ಷ ಶಾಸಕರಾಗಿ ಉತ್ತಮ ಆಡಳಿತ ನಡೆಸಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಅವರ ಕ್ಯಾಬಿನೆಟ್ ನಲ್ಲಿ ಯತೀಂದ್ರರವರು ಎಂಎಲ್ ಸಿ ಯಾಗಿ ಸಚಿವರಾಗಿ ಕೆಲಸ ಮಾಡಬೇಕೆಂಬುದು ನಮ್ಮ ಒತ್ತಾಸೆ ಎಂದರು.

ಹಾಗೆಯೇ ಇದರ ಜೊತೆಗೆ ಸುನಿಲ್ ಬೋಸ್ ರಿಗೂ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು. ತಮ್ಮ ತಂದೆಯವರಿಗೋಸ್ಕರ ಇಬ್ಬರು ಯುವನಾಯಕರು ಕ್ಷೇತ್ರ ತ್ಯಾಗ ಮಾಡಿದ್ದಾರೆ. ಆಗಾಗಿ ಇಬ್ಬರಿಗೂ ಸೂಕ್ತ ಸ್ಥಾನಮಾನ ನೀಡಲಿ ಎಂದು ರಮೇಶ್ ಆಗ್ರಹಿಸಿದರು.

Key words: Former MLA -Yatindra Siddaramaiah – MLC- seat- demand