ಸಿದ್ಧು ಎಲ್ಲಾ ಧರ್ಮದ ಗುರುಗಳನ್ನ ಗೌರವಿಸುತ್ತಾರೆ: ಹೇಳಿಕೆ ತಿರುಚಿ ಅಪಪ್ರಚಾರ –ಮಾಜಿ ಸಚಿವ ಯುಟಿ ಖಾದರ್.

Promotion

ಮಂಗಳೂರು,ಮಾರ್ಚ್,27,2022(wwww.justkannada.in): ಸಿದ್ಧರಾಮಯ್ಯ ಎಲ್ಲಾ ಧರ್ಮದ ಗುರುಗಳನ್ನ ಗೌರವಿಸುತ್ತಾರೆ.  ಆದರೆ ಹೇಳಿಕೆ ತಿರುಚಿ ಅಪಪ್ರಚಾರ ಮಾಡಲಾಗಿದೆ ಎಂದು ಮಾಜಿ ಸಚಿವ ಯುಟಿ ಖಾದರ್ ತಿಳಿಸಿದರು.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಯುಟಿ ಖಾದರ್,  ಸ್ವಾಮೀಜಿಗಳ ಜತೆ ಸಿದ್ಧರಾಮಯ್ಯ ಆತ್ಮಿಯರಾಗಿದ್ದಾರೆ. ಆದರೆ ಹೇಳಿಕೆ ತಿರುಚಿ ಅಪಪ್ರಚಾರ ಮಾಡಿದ್ದಾರೆ.  ಸಿದ್ಧರಾಮಯ್ಯ ಆರ್ಚಕರ ಗೌರವ ಧನ ಹೆಚ್ಚಿಸಿದ್ದರು  ಆದ್ರ ಬಿಜೆಪಿ ಈವರೆಗೆ ಅ ಕೆಲಸ ಮಾಡಿಲ್ಲ. ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇನ್ನು ಸರ್ಕಾರ  ಈಗಾಗಲೇ ಹಿಜಾಬ್ ಕುರಿತು ಆದೇಶ ಹೊರಡಿಸಿದೆ. ಸುಪ್ರೀಂಕೋರ್ಟ್ ನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ. ನೆಮ್ಮದಿಯಿಂದ ಒತ್ತಡ  ಇಲ್ಲದೆ ಪರೀಕ್ಷೆ ಬರೆಯಿರಿ. ಸಮವಸ್ತ್ರ ನಿಯಮ ಪಾಲಿಸಿ ಪರೀಕ್ಷೆ ಬರೆಯಿರಿ ಎಂದು ಮಾಜಿ ಸಚಿವ ಯುಟಿ ಖಾದರ್ ತಿಳಿಸಿದರು.

Key words: former minister –ut khaddar-siddaramaiah