ಪಕ್ಷ ಸಂಘಟನೆಯಲ್ಲಿ ಚಾಣಕ್ಯ: ಲಕ್ಷ್ಮಣ್ ಸವದಿಗೆ ಮಂತ್ರಿಗಿರಿ ನೀಡಿರುವುದು ಸರಿ ಇದೆ ಎಂದ ಮಾಜಿ ಸಚಿವ ಮುರುಗೇಶ್ ನಿರಾಣಿ…

Promotion

ಬೆಂಗಳೂರು,ಆ,23,2019(www.justkannada.in): ಪಕ್ಷ ಸಂಘಟನೆ ಮಾಡುವುದರಲ್ಲಿ ಲಕ್ಷ್ಮಣ್ ಸವದಿ ಚಾಣಕ್ಯ. ಹೀಗಾಗಿ ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ನೀಡಿರುವುದು ಸರಿ ಇದೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಮುರುಗೇಶ್ ನಿರಾಣಿ, ಸಚಿವ ಸ್ಥಾನ ಸಿಗದಿರುವುದಕ್ಕೆ ನನಗೆ ಬೇಸರವಿಲ್ಲ. ನಾನು ಇನ್ನೂ 25 ವರ್ಷ ರಾಜಕಾರಣ ಮಾಡುವ ಅವಕಾಶವಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿದರೇ ಮುಂದೆ ಬರಬಹುದು. ನಮ್ಮ ನಾಯಕರು ಕೈಗೊಂಡಿರುವ ನಿರ್ಧಾರಕ್ಕೆ ನಾನು ಬದ್ಧ ಎಂದರು.

ಸಾಮಾನ್ಯ ಜನ, ರೈತರ ಪರ ನಿರಂತರವಾಗಿ ಕೆಲಸ ಮಾಡುತ್ತೇನೆ. ಸಚಿವ ಸ್ಥಾನಕ್ಕಾಗಿ ನಾನು ಲಾಬಿ ಮಾಡಿಲ್ಲ, ಮಾಡುವುದೂ ಇಲ್ಲ. ಪಕ್ಷದಲ್ಲಿ ಬೇರೆಯವರಿಗೂ ಅವಕಾಶ ನೀಡಲಿ ನಮ್ಮ ಅಭ್ಯಂತರವಿಲ್ಲ. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನ ಇದ್ದೇ ಇರುತ್ತೆ. ಸಿಎಂ ಅವರ ಜತೆ ಮಾತನಾಡುತ್ತಾರೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ  ತಿಳಿಸಿದರು.

Key words:  Former minister- Murugesh Nirani – Laxman savadi- given – ministerial post.