ಮಂತ್ರಿ ಸ್ಥಾನ ಬೇಡ ಎಂದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ.

Promotion

ಬೆಂಗಳೂರು,ಫೆಬ್ರವರಿ,3,2023(www.justkannada.in):  ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಕ್ಲಿನ್ ಚಿಟ್ ಸಿಕ್ಕ ಮೇಲೆ ಸಚಿವ ಸ್ಥಾನ ನೀಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಒತ್ತಡ ಹೇರುತ್ತಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಇದೀಗ ಮಂತ್ರಿಗಿರಿ ಬೇಡ ಎಂದು ಹೇಳಿದ್ದಾರೆ.

ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗಿ ಚರ್ಚಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಸಚಿವ ಸಂಪುಟ ವಿಸ್ತರಣೆಗೆ ಏನೇನು ಸಮಸ್ಯೆಗಳಿದೆಯೋ ಗೊತ್ತಿಲ್ಲ ಪಕ್ಷ ಮತ್ತು ಸರ್ಕಾರಕ್ಕೆ ಸಮಸ್ಯೆ ಮಾಡಲು ನಾನು ತಯಾರಿಲ್ಲ. ಹೀಗಾಗಿ ಮಂತ್ರಿ ಮಾಡುವ ಅವಶ್ಯಕತೆ ಇಲ್ಲ ಎಂದು ಸಿಎಂಗೆ ಹೇಳಿದ್ದೇನೆ. ಸಿಎಂ ಬಳಿ ಮಂತ್ರಿ ಸ್ಥಾನ ಬೇಡ ಎಂದು ಹೇಳಿದ್ದೇನೆ ಎಂದರು.

ಸಂತೋಷ್  ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ಕನಸು ಬಿದ್ದಿರಲಿಲ್ಲ. ಸಂತೋಷ್ ಮಲಗಿದ್ದು ಒಂದು ಕಡೆ ಆದರೆ  ಪತ್ರ ಸಿಕ್ಕಿದ್ದು ಮತ್ತೊಂದು ಕಡೆ.  ಈ ಕೇಸ್ ನಲ್ಲಿ ನನಗೆ ಕ್ಲೀನ್ ಚಿಟ್ ಸಿಕ್ಕಿದೆ . ಸಿಎಂ ಸಂಪುಟ ವಿಸ್ತರಣೆ ಮಾಡುವುದಾಗಿ ಭರವಸೆ ನೀಡಿದ್ದರು. ಈಗ ಸಿಎಂ ಏನು ಸಮಸ್ಯೆ ಇದೆಯೋ ಗೊತ್ತಿಲ್ಲ ಸಚಿವ ಸ್ಥಾನ ನನಗೆ ಬೇಡ ಎಂದು ಹೇಳಿದ್ದೇನೆ ಎಂದರು.

ಗುಜರಾತ್ ಮಾದರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ, ಕರ್ನಾಟಕಕ್ಕೆ ಕರ್ನಾಟಕವೇ ಮಾಡೆಲ್. ಗುಜರಾತ್ ಗೆದ್ದ ಬಳಿಕ ಗುಜರಾತ್ ಮಾಡಲ್. ಕರ್ನಾಟಕ ಗೆದ್ದ ಬಳಿಕ ಕರ್ನಾಟಕ ಮಾಡೆಲ್ ಅಂತೀವಿ ಎಂದರು.

Key words: Former minister -KS Eshwarappa – did not -want – ministerial seat