ಮೈಸೂರಿನ ಸಿದ್ಧರಾಮಯ್ಯ ನಿವಾಸಕ್ಕೆ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಭೇಟಿ ಪರಿಶೀಲನೆ…

Promotion

ಮೈಸೂರು,ಆ,4,2020(www.justkannada.in): ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೊರೋನಾ ಸೋಂಕು ದೃಢವಾಗಿದ್ದು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಮೈಸೂರಿನ ಟಿ.ಕೆ ಬಡಾವಣೆಯಲ್ಲಿರುವ ಸಿದ್ಧರಾಮಯ್ಯ ಅವರ ನಿವಾಸವನ್ನ ಸೀಲ್ ಡೌನ್ ಮಾಡಲಾಗಿದೆ.jk-logo-justkannada-logo

ಈ ಹಿನ್ನೆಲೆ ಸಿದ್ದರಾಮಯ್ಯ ನಿವಾಸಕ್ಕೆ ಅವರ ಅಪ್ತ ಮಾಜಿ ಸಚಿವ ಎಚ್.ಸಿ ಮಹದೇವಪ್ಪ ಭೇಟಿ ನೀಡಿ ಸೀಲ್ ಡೌನ್ ಪ್ರಕ್ರಿಯೆ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಹೆಚ್.ಸಿ ಮಹದೇವಪ್ಪ, ಸಿದ್ದರಾಮಯ್ಯ ಅವರಿಗೆ ಸೊಂಕು ದೃಢವಾಗಿರುವುದು ನೋವು ತಂದಿದೆ. ಅವರು ಅದಷ್ಟು ಬೇಗ ಗುಣಮುಖವಾಗಲಿ ಎಂದು ಹಾರೈಸಿದರು.

ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು. ಇಂತಹ ಸಂದರ್ಭದಲ್ಲಿ ರಾಜಕೀಯ ‌ನಾಯಕರಿಂದ ಸಾರ್ವಜನಿಕರು ಕಾರ್ಯಕರ್ತರು ದೂರ ಇರಬೇಕು. ನಾನು ಕೂಡ ಸಂಪರ್ಕದಲ್ಲಿ ಇದ್ದೆ. ನಾನೂ ಕೂಡ ಮುಂಜಾಗ್ರತಾ ಕ್ರಮ ವಹಿಸುತ್ತೇನೆ ಎಂದು ಹೆಚ್.ಸಿ ಮಹದೇವಪ್ಪ ತಿಳಿಸಿದರು.former-minister-hc-mahadevappa-visits-siddaramaiah-residence-seal-down-mysore

ಸಿಎಂ ಯಡಿಯೂರಪ್ಪ ಅವರ ಕೂಡ ಬೇಗ ಗುಣಮುಖರಾಗಿ ಹೊರಬರಲಿ. ಆದಷ್ಟು ಬೇಗ ಮತ್ತೆ ಜನರ ಸೇವೆ ಮರಳುವಂತಾಗಲಿ. ರಾಜಕೀಯ ನಾಯಕರು ಅಂದ್ರೆ ಸಾರ್ವಜನಿಕ ಸಂಪರ್ಕದಲ್ಲಿ ಇರಬೇಕಾಗುತ್ತದೆ. ಹಾಗಾಗಿ ಇಂತಹ ಸಂದರ್ಶನದಲ್ಲಿ ಹೆಚ್ಚಿನ ಮುಂಜಾಗ್ರತೆ ಅಗತ್ಯ. ಯಾರೆಲ್ಲಾ ಸಂಪರ್ಕದಲ್ಲಿ ಇದ್ರೂ ಅವರು ಸೆಲ್ಫ್ ಕ್ವಾರಂಟೈನ್ ಆಗಿ ಲಕ್ಷಣಗಳು ಕಂಡು ಬಂದ್ರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೆಚ್.ಸಿ ಮಹದೇವಪ್ಪ ತಿಳಿಸಿದರು.

Key words: Former Minister- HC Mahadevappa -visits -Siddaramaiah -residence – seal down-Mysore.