ಆನೆ ಹೋಗುತ್ತೆ, ನಾಯಿ ಬೊಗಳುತ್ತೆ. ಅದರಿಂದ ಏನು ಆಗೋಲ್ಲ- ಸಿದ್ಧರಾಮಯ್ಯ ಪರ ಹೆಚ್.ಸಿ ಮಹದೇವಪ್ಪ ಬ್ಯಾಟಿಂಗ್…

ಮೈಸೂರು,ಫೆಬ್ರವರಿ,27,2021(www.justkannada.in):  ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿದ್ದು, ಈ ನಡುವೆ ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಘೋಷಣೆ ಕೂಗಿದವರನ್ನ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ನಾಯಿಗಳಿಗೆ ಹೋಲಿಸಿದ್ದಾರೆ.jk

ಸಿದ್ದರಾಮಯ್ಯ ವಿರುದ್ದ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ   ಖಾರವಾಗಿಯೇ  ಪ್ರತಿಕ್ರಿಯಿಸಿದ  ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ, ಆನೆ ಹೋಗುತ್ತೆ ನಾಯಿ ಬೊಗಳುತ್ತೆ. ಅದರಿಂದ ಏನು ಆಗೋಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾನ್ ನಾಯಕರ ವಿರುದ್ದ ದೋಷಣೆ ಮಾಡಲಾಗಿತ್ತು. ಆದ್ರೆ ಅವರ ಹೆಸರುಗಳೇನು ಚರಿತ್ರೆಯಲ್ಲಿ ಹಾಳಾಯ್ತಾ.? ಆ ಮಹಾನ್ ನಾಯಕರ ವರ್ಚಸ್ಸಿಗೆ ಧಕ್ಕೆಯಾಯಿತಾ.? ಇದು ಹಾಗೇಯೆ ಘೋಷಣೆ ಕೂಗೋದ್ರಿಂದ ಏನು ಆಗೋಲ್ಲ. ಆನೆ ಹೋಗುತ್ತಲೇ ಇರುತ್ತೆ ನಾಯಿ ಬೊಗಳುತ್ತಲೇ ಇರುತ್ತೆ ಎಂದು ಟಾಂಗ್ ನೀಡಿದರು.former minister-HC Mahadevappa -batting –former CM- Siddaramaiah- Proclamation of defiance

ಮೈಸೂರಿನಲ್ಲಿ ಕಾರ್ಯಕರ್ತರೇ ನಾಯಕರ ವಿರುದ್ದ ತಿರುಗಿ ಬಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಪರ ಮಾತ್ರ  ಬ್ಯಾಟ್ ಬೀಸಿದ ಮಾಜಿ ಸಚಿವ ಎಚ್ ಸಿ ಮಹದೇವಪ್ಪ, ಸಿದ್ದರಾಮಯ್ಯ ವಿರುದ್ದ ಘೋಷಣೆ ದುರಾದೃಷ್ಟಕರ. ತನ್ವೀರ್  ಸೇಠ್ ವಿರುದ್ದ ಕೂಗಿಗೆ ಕೆಪಿಸಿಸಿ ಅಧ್ಯಕ್ಷರು ತೀರ್ಮಾನ ಕೈಗೊಳ್ಳುತ್ತಾರೆ. ಸಿದ್ದರಾಮಯ್ಯ ಒಬ್ಬ ಶ್ರೇಷ್ಠ ನಾಯಕ. ಅವರನ್ನು ಅರ್ಥ ಮಾಡಿಕೊಳ್ಳದೆ ಕೆಲವರು ಘೋಷಣೆ ಕೂಗಿದ್ದು ಸರಿಯಲ್ಲ. ಈ ರೀತಿ ಬೆಳವಣಿಗೆ ಸ್ಥಳೀಯ ಕಾಂಗ್ರೆಸ್ ಸಂಘಟನೆಗೆ ಆರೋಗ್ಯಕರವಲ್ಲ ಎಂದು ಘಟನೆಯನ್ನ ಖಂಡಿಸಿದರು.

Key words: former minister-HC Mahadevappa -batting –former CM- Siddaramaiah- Proclamation of defiance