ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಮಾಜಿ ಸಚಿವ ಡಿ.ಕೆ ಶಿವಕುಮಾರ್…

Promotion

ಮೈಸೂರು,ನ,8.2019(www.justkannada.in):   ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಇಂದು ರಾಜಕೀಯ ನಾಯಕರ ದಂಡೇ ಆಗಮಿಸಿತ್ತು.

ಮಾಜಿ ಸಚಿವ ಡಿಕೆ ಶಿವ ಕುಮಾರ್, ಮಾಜಿ ಪ್ರದಾನಿ ದೇವೇಗೌಡ, ಮಾಜಿ ಸಂಸದ ಆರ್ ಧ್ರುವನಾರಯಣ್,  ಶಾಸಕ ಜಿಟಿ ದೇವೇಗೌಡ, ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಚಾಮುಂಡಿ ಸನ್ನಿಧಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ‌ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮುಖಾಮುಖಿಯಾದ ಘಟನೆ ನಡೆಯಿತು.

ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನ ನೋಡಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ದೇವೇಗೌಡರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಈ ವೇಳೆ ಡಿಕೆಶಿ ಅವರನ್ನು ನೋಡುತ್ತಲೇ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹಾರೈಸಿದರು.

ಗೌಡರ ಕುಟುಬದ ಜೊತೆ ಮುನಿಸು ಮುಂದುವರೆಸಿದ ಜಿ.ಟಿ. ದೇವೇಗೌಡ...

ಇತ್ತೀಚೆಗೆ ಜೆಡಿಎಸ್ ಕಾರ್ಯಕ್ರಮಗಳಿಂದ ದೂರ ಉಳಿದು ಜೆಡಿಎಸ್ ನಾಯಕರ ಜತೆ ಬೇಸರಗೊಂಡಿದ್ದ  ಮಾಜಿ ಸಚಿವ ಜಿ.ಟಿ ದೇವೇಗೌಡರು ಇದೀಗ ದೇವೇಗೌಡರ ಕುಟುಬದ ಜೊತೆ ಮುನಿಸು ಮುಂದುವರೆಸಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಹೆಚ್.ಡಿ.ದೇವೇಗೌಡರನ್ನು ಜಿಟಿ ದೇವೇಗೌಡರು ಭೇಟಿ ಮಾಡದೆ ಹಾಗೆಯೇ ತೆರಳಿದ್ದಾರೆ. ದೇವೇಗೌಡರ ಆಗಮನದ ವಿಷಯ ತಿಳಿದ ಜಿಟಿ ದೇವೇಗೌಡರು ಅಲ್ಲಿಂದ ಬಹುಬೇಗ  ಕಾಲ್ಕಿತ್ತಿದ್ದಾರೆ. ಡಿಕೆಶಿ ಜೊತೆ ದೇವಿಯ ದರ್ಶನ ಪಡೆದು ಒಂದು ನಿಮಿಷವೂ ನಿಲ್ಲದೆ ತೆರಳಿದ ಪ್ರಸಂಗ ನಡೆಯಿತು.

Key words: Former minister –DK Sivakumar –blessed – former prime minister–HD Deve Gowda.