ಇಡಿ ಪರ ವಕೀಲರ ವಿರುದ್ದ ಗರಂ: ಲಿಖಿತ ವಾದ ಸಲ್ಲಿಸುವಂತೆ ಸೂಚಿಸಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಜಾಮೀನು ಆದೇಶ ಕಾಯ್ದಿರಿಸಿದ  ದೆಹಲಿ ಹೈಕೋರ್ಟ್…

ನವದೆಹಲಿ,ಅ,17,2019(www.justkannada.in): ಲಿಖಿತ ವಾದ  ಸಲ್ಲಿಸುವಂತೆ ಸೂಚಿಸಿ  ಮಾಜಿ ಸಚಿವ ಡಿ.ಕೆ ಶಿವಕುಮಾರ್ ಜಾಮೀನು ಅರ್ಜಿ ಆದೇಶವನ್ನ ನವದೆಹಲಿಯ ಹೈಕೋರ್ಟ್ ಕಾಯ್ದಿರಿಸಿದೆ.

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಆರಂಭವಾದರೂ ಕೋರ್ಟ್ ಗೆ ಆಗಮಿಸದ ಇಡಿಪರ ವಕೀಲರ ವಿರುದ್ದ ಹೈಕೋರ್ಟ್ ನ್ಯಾಯಮೂರ್ತಿ ಗರಂ ಆದರು. ಈ ವೇಳೆ ವಿಚಾರಣೆಯನ್ನ ಅರ್ಧಗಂಟೆ ಮುಂದೂಡುವಂತೆ ಇಡಿ ಪರ ಕಿರಿಯ ವಕೀಲರು ಕೋರ್ಟ್ ಗೆ ಮನವಿ ಮಾಡಿದರು.

ಇಡಿಪರ ವಕೀಲರ ನಡೆಗೆ ಗರಂ ಆದ ನವದೆಹಲಿ ಹೈಕೋರ್ಟ್ ನ್ಯಾಯಾಧೀಶರು, ಇದು ಸರಿಯಾದ ನಡೆ ಅಲ್ಲ. ನ್ಯಾಯಾಲಯವನ್ನ ಹಗುರವಾಗಿ ತೆಗೆದುಕೊಳ್ಳಬೇಡಿ.  ಕೊರ್ಟ್ ಮುಂದೆ ಕಣ್ಣಾಮುಚ್ಚಾಲೆ ಆಟವಾಡಬೇಡಿ ಎಂದು ಕಿಡಿಕಾರಿದರು.  ಇದೇ ವೇಳೆ ಕೋರ್ಟ್ ಹಾಲ್ ಗೆ ತಡವಾಗಿ ಬಂದ ಇಡಿ ಪರ ವಕೀಲ ನಟರಾಜ್ ಅವರಿಗೆ ಕೋರ್ಟ್ ತರಾಟೆ ತೆಗೆದುಕೊಂಡಿತು.

ನಂತರ ಶನಿವಾರ ಮಧ್ಯಾಹ್ನ 12 ಗಂಟೆ ಒಳಗೆ ಲಿಖಿತ ವಾದ ಸಲ್ಲಿಸುವಂತೆ ಇಡಿ ಪರ ವಕೀಲರಿಗೆ ಸೂಚಿಸಿ ಜಾಮೀನು ಅರ್ಜಿ ಆದೇಶವನ್ನ ಕೋರ್ಟ್ ಕಾಯ್ದಿರಿಸಿದೆ. ಆದರೆ ತೀರ್ಪಿನ ದಿನಾಂಕವನ್ನ ಪ್ರಕಟಿಸಿಲ್ಲ.

Key words: Former minister -DK Sivakumar – bail – Delhi High Court- reserved- judgment