ಪೈಗಂಬರ್ ಇದ್ದಾಗ ಧ್ವನಿವರ್ಧಕ ಇರಲಿಲ್ಲ: ಈಗ ಅಲರಾಂ ಇಟ್ಟುಕೊಂಡು ನಮಾಜ್ ಮಾಡಲಿ- ಮಾಜಿ ಸಚಿವ ಸಿ.ಟಿ ರವಿ.

Promotion

ನವದೆಹಲಿ,ಏಪ್ರಿಲ್,4,2022(www.justkannada.in):  ಹಿಜಾಬ್ , ಹಲಾಲ್ ವಿವಾದದ ಬಳಿಕ ಇದೀಗ ಅಜಾನ್ ,ಮಸೀದಿಗಳಲ್ಲಿ ಮೈಕ್ ಬ್ಯಾನ್ ವಿಚಾರ ಮುನ್ನೆಲೆಗೆ ಬಂದಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಮೈಕ್ ಬ್ಯಾನ್ ಪರ ಬ್ಯಾಟ್ ಬೀಸಿದ್ದಾರೆ.

ಈ ಸಂಬಂಧ ಮಾತನಾಡಿರುವ ಸಿ.ಟಿ ರವಿ,  ಅಜಾನ್ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕು. ಪೈಗಂಬರ್ ಇದ್ದಾಗ ಧ್ವನಿವರ್ಧಕ ಇರಲಿಲ್ಲ.  ಕುರಾನ್ ಬರೆದಾಗ ಧ್ವನಿವರ್ಧಕ ಇರಲಿಲ್ಲ. ಅಜಾನ್ ಕೂಗೂದು ಪ್ರಾರ್ಥನೆಗೆ ಬನ್ನಿ ಎನ್ನಲು.  ಈಗ ಅಲರಾಂ ಇಟ್ಟುಕೊಂಡು ನಮಾಜ್ ಮಾಡಲಿ  ಎಂದಿದ್ದಾರೆ.

ಮದರಸಾಗಳಲ್ಲಿ ದೇಶಪ್ರೇಮ ಬಿಂಬಿಸುವ ಪಠ್ಯಕ್ರಮ. ಎಲ್ಲೆಡೆ ದೇಶಪ್ರೇಮದ ವಿಚಾರ ತರಬೇಕು ಎಂದ ಸಿ.ಟಿ ರವಿ,  ಕರ್ನಾಟಕವನ್ನು ನೆಹರು ಕಾಲದ ಕಾಶ್ಮೀರ ಮಾಡಬೇಡಿ. ಕರ್ನಾಟಕ ಕರ್ನಾಟಕವಾಗಿಯೇ ಇರಲು ಬಿಡಿ ಎಂದು ಕಾಂಗ್ರೆಸ್ ಗೆ ಟಾಂಗ್ ನೀಡಿದರು.

Key words: Former Minister -CT Ravi – no loudspeaker-ajan