ಮಾಜಿ ಡಿಸಿಎಂ ಪರಮೇಶ್ವರ ಪಿಎ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

Promotion

ಬೆಂಗಳೂರು, ಅಕ್ಟೋಬರ್ 13, 2019 (www.justkannada.in): ಮಾಜಿ ಡಿಸಿಎಂ ಪರಮೇಶ್ವರ್ ಪಿಎ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಮನೆಗೆ ಹೋಗೇ ಇಲ್ಲ ಎಂದು ಐಟಿ ಅಧಿಕಾರಿಗಳು ಸ್ಪಷ್ಟನೆ ಕೊಟ್ಟಿದ್ದರು.

ಇದೀಗ ಅದು ಸುಳ್ಳು ಎಂಬ ಅಂಶ ಬೆಳಕಿಗೆ ಬಂದಿದೆ. ಐಟಿ ಅಧಿಕಾರಿಗಳು ಅಕ್ಟೋಬರ್ 10ರಂದು ಅವರ ಮನೆಗೆ ಭೇಟಿ ಕೊಟ್ಟಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಅಂದು ಮಧ್ಯಾಹ್ನ 1.18ರ ರ ಸುಮಾರಿಗೆ ಇನ್ನೋವಾ ಕಾರಿನಲ್ಲಿ ಐಟಿ ಅಧಿಕಾರಿಗಳು ಬಂದಿದ್ದರು.

ಆರು ಮಂದಿ ಐಟಿ ಅಧಿಕಾರಿಗಳು, ಪೊಲೀಸ್ ಪೇದೆಗಳ ಸಮೇತ ರಮೇಶ್ ಮನೆಗೆ ಬಂದಿದ್ದರು. ಸಂಜೆ 6 ಗಂಟೆಯ ವರೆಗೆ ವಿಚಾರಣೆ ಕಡತಗಳ ಪರಿಶೀಲನೆ ನಡೆಸಿ ತೆರಳಿದ್ದ ಐಟಿ ಅಧಿಕಾರಿಗಳು ಎಂಬ ವಿಷಯ ಬೆಳಕಿಗೆ ಬಂದಿದೆ.

ಇದಾದ ಎರಡೇ ದಿನದಲ್ಲೇ ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ದಿನ ಬೆಳಿಗ್ಗೆ 9 ಗಂಟೆಗೆ ತನ್ನ ಮಡದಿ ಮಕ್ಕಳಿಗೆ ಕೈಯಲ್ಲೇ ಹೋಗಿಬರೋದಾಗಿ ರಮೇಶ್ ಸನ್ನೆ ಮಾಡಿದ್ದರು.