ಸಿಎಂ ರೇಸ್ ನಲ್ಲಿ ನೀವು ಇದ್ದೀರಾ ಎಂಬ ಪ್ರಶ್ನೆಗೆ ಮಾರ್ಮಿಕ ಉತ್ತರ ನೀಡಿದ ಮಾಜಿ ಡಿಸಿಎಂ ಡಾ ಜಿ.ಪರಮೇಶ್ವರ್.

ಮೈಸೂರು,ಜೂನ್,24,2021(www.justkannada.in): ಹಲವು ಶಾಸಕರು ಸಿದ್ಧರಾಮಯ್ಯ ಮುಂದಿನ ಸಿಎಂ ಎಂದು ಹೇಳಿಕೆ ನೀಡಿರುವುದು ಕಾಂಗ್ರೆಸ್ ಪಾಳಯದಲ್ಲಿ ಸಾಕಷ್ಟು ಗೊಂದಲ ಮೂಡಿಸಿದ್ದು ಈ ನಡುವೆ  ನೀವು ಸಿಎಂ ರೇಸ್ ನಲ್ಲಿ ಇದ್ದೀರಾ ಎಂಬ ಪ್ರಶ್ನೆಗೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮಾರ್ಮಿಕ ಉತ್ತರ ನೀಡಿದ್ದಾರೆ.jk

ಆ ಸಮಯ ,ಸಂದರ್ಭ ಬರಲಿ ಆಗ ಅದನ್ನು ಹೇಳುತ್ತೇನೆ ಎಂದು ಹೇಳುವ ಮೂಲಕ  ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸಿಎಂ ಆಗುವ ಆಸೆಯನ್ನ ಪರೋಕ್ಷವಾಗಿ ಬಿಚ್ಚಿಟ್ಟಿದ್ದಾರೆ. ಮೈಸೂರಿನಲ್ಲಿ ಸುತ್ತೂರು ಶ್ರೀಗಳನ್ನ ಭೇಟಿಯಾದ ಬಳಿಕ ಮಾತನಾಡಿದ ಮಾಜಿ ಡಿಸಿಎಂ ಡಾ.ಜಿ.‌ಪರಮೇಶ್ವರ್, ನನ್ನನು ಭಾವಿ ಸಿಎಂ ಎಂದು ಕಾರ್ಯಕರ್ಯರು ಘೋಷಣೆ ಕೂಗಿದ್ರು. ನಾನು ಆ ರೀತಿ ಕೂಗಬೇಡಿ ಎಂದು ಹೇಳಿದ್ದೇನೆ‌. ಚುನಾವಣೆ ಇನ್ನೂ ಎರಡು ವರ್ಷ ಇದೆ. ಈಗಲೇ ಈ ವಿಚಾರ ಚರ್ಚೆ ಸರಿಯಲ್ಲ‌.

ನಾವೆಲ್ಲಾ ಗೆಲ್ಲಬೇಕು, ಬಹುಮತ ಬರಬೇಕು, ಬಂದಮೇಲೆ, ಶಾಸಕರು ಅಭಿಪ್ರಾಯ ಹೇಳುತ್ತಾರೆ. ಇಲ್ಲಿಯವರೆಗೆ ಕಾಂಗ್ರೆಸ್ ಶಾಸಕರು ಶಾಸಕಾಂಗ ಸಭೆಯಲ್ಲಿ ನಿರ್ದಿಷ್ಟವಾಗಿ ಇಂತವರೇ ಮುಖ್ಯಮಂತ್ರಿ ಎಂದು ಹೆಸರು ಸೂಚಿಸಿಲ್ಲ. ಕೇವಲ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದಾರೆ. ಇದೇ ಸಂಸ್ಕೃತಿ ಮುಂದೆಯೂ ಇರಲಿದೆ‌ ಎಂದು ತಿಳಿಸಿದರು.

ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಅನ್ನೋ ಕೂಗಿಗೆ ಟಾಂಗ್.

ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂಬ ಕೂಗಿಗೆ ಟಾಂಗ್ ನೀಡಿದ ಡಾ.ಜಿ‌.ಪರಮೇಶ್ವರ್, ನಮ್ಮ ಸ್ನೇಹಿತರಲ್ಲಿ ಹಿರಿಯರಲ್ಲಿ ಮನವಿ ಮಾಡುತ್ತೇನೆ‌. ಸಿಎಂ ವಿಚಾರದ ಚರ್ಚೆ ನಿಲ್ಲಿಸಿ, ಇದನ್ನು ಇನ್ನು ಬೆಳೆಸಬೇಡಿ ಎಂದು ಮಾಜಿ ಡಿಸಿಎಂ ಪರಮೇಶ್ವರ್ ಹೇಳಿದರು.

ಬಿಜೆಪಿ ಕಾರ್ಯಕರ್ತರು ತಾವೇ ವ್ಯಾಕ್ಸಿನ್ ತಯಾರಿಸಿ ಹಂಚುತ್ತಿರುವ ರೀತಿ ವರ್ತಿಸುತ್ತಿದ್ದಾರೆ.

ಬಿಜೆಪಿ ಕಾರ್ಯಕರ್ತರು ತಾವೇ ವ್ಯಾಕ್ಸಿನ್ ತಯಾರಿಸಿ ಹಂಚುತ್ತಿರುವ ರೀತಿ ವರ್ತಿಸುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಬಿಜೆಪಿ ಕಾರ್ಯಕರ್ತರೇ ಬೇಕಾದರೆ ತಮ್ಮ ಹಣದಲ್ಲಿ ಹಂಚಿ ಪ್ರಚಾರ ಪಡೆಯಲಿ. ಅದು ಬಿಟ್ಟು ಸರ್ಕಾರ ಹಂಚುತ್ತಿರುವ ವ್ಯಾಕ್ಸಿನ್‌ ನಲ್ಲಿ ಪಕ್ಷದ ಪ್ರಚಾರ ಒಳೆಯದ್ದಲ್ಲ ಎಂದು ಪರಮೇಶ್ವರ್ ಆಕ್ಷೇಪಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣದಲ್ಲಿ ವಿಫಲವಾಗಿವೆ. ಕೋವಿಡ್ ನಿಯಂತ್ರಣದ ಪೂರ್ವ ಸಿದ್ದತೆ ಸರಿಯಾಗಿ ಮಾಡಲಿಲ್ಲ. ಖಾಸಗಿ ಆಸ್ಪತ್ರೆಗಳನ್ನು ಇನ್ನು ವಿಶ್ವಾಸಕ್ಕೆ ಪಡೆದುಕೊಂಡಿಲ್ಲ. ಇದು ಸರ್ಕಾರದ ವಿಫಲತೆ- ಇದರಿಂದ ಹೆಚ್ಚಿನ ಸಾವುಗಳು ಆದವು ಎಂದು  ಮಾಜಿ ಡಿಸಿಎಂ ಪರಮೇಶ್ವರ್ ತಿಳಿಸಿದರು.

Key words: Former DCM- Dr G Parameshwar – mystic -answer -question -CM race.