ಬೊಮ್ಮಾಯಿ ಅಸಮರ್ಥ ಸಿಎಂ ಎಂದ ಸಿದ್ಧರಾಮಯ್ಯಗೆ ಚಾಮುಂಡೇಶ್ವರಿ ಸೋಲು ಉಲ್ಲೇಖಿಸಿ ಟಾಂಗ್ ಕೊಟ್ಟ ಸಚಿವ ಸುಧಾಕರ್.

Promotion

ಚಿಕ್ಕಬಳ್ಳಾಪುರ, ಆಗಸ್ಟ್, 26,2022(www.justkannada.in):   ಬಸವರಾಜ ಬೊಮ್ಮಾಯಿ ಅಸಮರ್ಥ ಸಿಎಂ ಎಂದು ಟೀಕಿಸಿದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟಾಂಗ್ ನೀಡಿದ್ದಾರೆ.

ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸಚಿವ ಸುಧಾಕರ್, ಕಳೆದ ಚುನಾವಣೆಯಲ್ಲಿ ಸಿದ್ಧರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.  ಸಿದ್ಧರಾಮಯ್ಯ ಸಮರ್ಥ ಸಿಎಂ ಆಗಿದ್ದರೇ ಯಾಕೆ ಸೋತರು..? ಐದು ವರ್ಷಗಳ ಕಾಲ ಅವಕಾಶ ಸಿಕ್ಕಿತ್ತು, ಆದರೆ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿ 1ವರ್ಷ ಆಗಿದೆ . ಬಿಎಸ್ ವೈ ರಾಜೀನಾಮೆ ನಂತರ ಆಡಳಿತ ನಡೆಸುವುದು ಸುಲಭ ಅಲ್ಲ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ನಾಯಕ ಕೆಎಚ್ ಮುನಿಯಪ್ಪ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಭೇಟಿಯಲ್ಲಿ ಯಾವುದೇ ರಾಜಕೀಯ ಸಂಬಂಧ ಇಲ್ಲ. ಆದಿಜಾಂಬವ ಮಠಕ್ಕೆ ಜಮೀನು ವಿಚಾರ.  ಸಿಎಂ ಬಳಿ ಕರೆದೊಯ್ದಿದ್ದೆ ಅಷ್ಟೆ. ಮುನಿಯಪ್ಪ ಯಾವುದೇ ಪಕ್ಷದಲ್ಲಿದ್ದರೂ ಒಳ್ಳೆಯ ನಾಯಕ ಎಂದರು.

Key words:  former CM-Siddaramaiah – why did – lose- Minister -Sudhakar