ಲವ್ ಜಿಹಾದ್ ಕಾಯ್ದೆ ಕುರಿತು ಸಿದ್ಧರಾಮಯ್ಯ ಹೇಳಿಕೆಗೆ ಸಚಿವ ಮಾಧುಸ್ವಾಮಿ ತಿರುಗೇಟು ನೀಡಿದ್ದು ಹೀಗೆ…

Promotion

ಕೊಪ್ಪ,ಡಿಸೆಂಬರ್,1,2020(www.justkannada.in):  ಲವ್ ಜಿಹಾದ್ ಕಾಯ್ದೆ ಜಾರಿಗೆ ತರಲು ಮುಂದಾಗಿರುವುದು ಮೂರ್ಖತನದ್ದು ಎಂದು ಹೇಳಿಕೆ ನೀಡಿದ್ಧ ಮಾಜಿ ಸಿಎಂ ಸಿದ್ಧರಾಮಯ್ಯಗೆ ಕಾನೂನು ಸಚಿವ ಮಾಧುಸ್ವಾಮಿ  ತಿರುಗೇಟು ನೀಡಿದ್ದಾರೆ.

ಸಿದ್ಧರಾಮಯ್ಯ ಅವರ ತಲೆಕೆಟ್ಟ ಹೇಳಿಕೆಗೆಲ್ಲಾ ನಾನು ಪ್ರತಿಕ್ರಿಯಿಸಲ್ಲ. ರಾಜ್ಯದಲ್ಲಿ ಲವ್ ಜಿಹಾದ್ ಕಾನೂನು ಜಾರಿ ಚಿಂತನೆ ಇಲ್ಲ. ಒಂದು ಸಮುದಾಯದ ಓಲೈಕೆ ಸರಿಯಲ್ಲ. ಎಲ್ಲರೂ ಮಿಕ್ಸ್ ಆಗಿರುವುದೇ ಭಾರತ. ದೇಶದಲ್ಲಿ ಶೇ 60ರಿಂದ 70ರಷ್ಟು  ಮೂಲ  ಹಿಂದೂಗಳೇ ಇದ್ಧಾರೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಹೆಚ್.ವಿಶ್ವನಾಥ್ ಸಚಿವರಾಗಲು ಅನರ್ಹರು ಎಂಬ ಹೈಕೋರ್ಟ್ ಆದೇಶ ಕುರಿತು ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ನಾವು ವಿಶ್ವನಾಥ್ ಪರ ಇರುತ್ತೇವೆ. ಅನ್ಯಾಯವಾಗಲು ಬಿಡಲ್ಲ. ನಮ್ಮ ಪಕ್ಷಕ್ಕೆ ಬಂದವರಿಗೆ ಯಾರಿಗೂ ಚೂರಿ ಹಾಕಲ್ಲ. ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.

Key words: former cm- Siddaramaiah- statement – Love Jihad Act – issued –Minister- Madhuswamy.