ಸಿದ್ದರಾಮಯ್ಯಗೆ ಉಲ್ಟಾ ಮಚ್ಚೆ:  ಅವರು ಹೇಳಿದ್ದೆಲ್ಲಾ ಉಲ್ಟಾ ಆಗುತ್ತೆ- ಶಾಸಕ ಸಿ.ಟಿ ರವಿ ವ್ಯಂಗ್ಯ.

Promotion

ಬೆಂಗಳೂರು,ಜುಲೈ,4,2022(www.justkannada.in): ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಖಚಿತ. 130 ರಿಂದ 140 ಸೀಟ್ ಪಡೆಯುತ್ತೇವೆ ಎಂದು ಹೇಳಿಕೆ ನೀಡಿದ್ಧ   ಮಾಜಿ ಸಿಎಂ ಸಿದ್ಧರಾಮಯ್ಯಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.

ಸಿದ್ಧರಾಮಯ್ಯಗೆ  ಉಲ್ಟಾ ಮಚ್ಚೆ ಇದೆ. ಹೀಗಾಗಿ ಅವರು ಹೇಳಿದ್ದೆಲ್ಲಾ ಉಲ್ಟಾ ಆಗುತ್ತೆ. ಖಾಲಿ ಡಬ್ಬ ಜಾಸ್ತಿ ಸೌಂಡ್ ಮಾಡುತ್ತೆ. ಸಿದ್ಧರಾಮಯ್ಯ ಮೋದಿ ಪ್ರಧಾನಿಯಾಗಲ್ಲ ಎಂದಿದ್ರು ಆದರೆ ಮೋದಿ ಅವರು ಆದರು ಎಂದು ಸಿ.ಟಿ ರವಿ ವ್ಯಂಗ್ಯವಾಡಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಶಾಸಕ ಸಿ.ಟಿ ರವಿ, ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ತರಲು ನಿರ್ಧಾರ  ಮಾಡಲಾಗಿದೆ. ಕರ್ನಾಟಕ ಮಿಷನ್ ಅಡಿಯಲ್ಲಿ ಪಕ್ಷ ಕಾರ್ಯ ನಿರ್ವಹಣೆ ಮಾಡುತ್ತದೆ.  ಬಿಜೆಪಿ ಬೆಳವಣಿಗೆ ಕಂಡು ಕೆಲವರು ಕಂಗೆಟ್ಟಿದ್ದಾರೆ. ಕೆಲವರು ಜಾತಿ ಹೆಸರೇಳಿ ರಾಜಕೀಯ ಮಾಡುತ್ತಾರೆ. ತಮಗೆ ಬೇಕಾದಂತೆ ಮುಖವಾಡ ಧರಿಸುತ್ತಾರೆ.  ಅಂತವರಿಗೆ ಜಾತಿ ಬಿಟ್ಟು ಬದುಕಲು ಆಗಲ್ಲ. ಕಾಂಗ್ರೆಸ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂದು ಟೀಕಿಸಿದರು.

ರಬ್ಬರ್ ಸ್ಟಾಂಪ್ ರಾಷ್ಟ್ರಪತಿ ಬೇಡ ಎಂಬ  ಯಶವಂತ ಸಿನ್ಹಾ ಅವರ ಹೇಳಿಕೆಗೆ ಟಾಂಗ್ ನೀಡಿದ ಸಿ.ಟಿ ರವಿ,  ದ್ರೌಪದಿ ಮುರ್ಮು ಶಿಕ್ಷಕಿ , ರಾಜ್ಯಪಾಲರಾಗಿದ್ದವರು.  ಮುರ್ಮು ಬಗ್ಗೆ ಸಿನ್ಹಾ ಹೇಳಿಕೆ ಸರಿಯಲ್ಲ. ಈ ರೀತಿ ಮಾತನಾಡುವ ಮನಸ್ಥಿತಿಯೇ ಆಪಾಯಕಾರಿ ಎಂದು ಟೀಕಿಸಿದರು.

Key words: former CM-Siddaramaiah- -reversed-MLA- CT Ravi