ಮಾಜಿ ಸಿಎಂ ಸಿದ್ಧರಾಮಯ್ಯಗೆ ಮತ್ತೆ ಪ್ರತಿಭಟನೆ ಬಿಸಿ:  ಮೊಟ್ಟೆ ಎಸೆತ, ಕಪ್ಪು ಬಾವುಟ ಪ್ರದರ್ಶನ.

ಕೊಡಗು,ಆಗಸ್ಟ್,18,2022(www.justkannada.in): ಕೊಡಗಿನಲ್ಲಿ ಭಾರೀ ಮಳೆ ಪ್ರವಾಹ  ಹಿನ್ನೆಲೆ ಬೆಳೆಹಾನಿಯ  ವೀಕ್ಷಣೆಗೆ  ತೆರಳಿದ್ಧ ಸಿದ‍್ಧರಾಮಯ್ಯಗೆ ಮತ್ತೆ  ಪ್ರತಿಭಟನೆಯ ಬಿಸಿ ತಟ್ಟಿದೆ.

ಕೊಡಗಿನ  ತಿಮ್ಮಯ್ಯ ಸರ್ಕಲ್‌  ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೇಲೆ ಮೊಟ್ಟೆ ಎಸೆದಿದ್ದಾರೆ.  ಮತ್ತೆ ಸಿದ‍್ಧರಾಮಯ್ಯ ವಿರುದ್ಧ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಈ ವೇಳೆ ಅಲ್ಲಿದ್ಧ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು . ತಿಮ್ಮಯ್ಯ ಸರ್ಕಲ್‌ನಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.

ಬೆಳಗ್ಗೆ ಕೊಡಗಿನ ಗಡಿ ಭಾಗದ ಪೋನ್ನಂಪೇಟೆ ತಾಲೂಕಿನ ತಿತಿಮತಿಯಲ್ಲಿ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡುವ ಮೂಲಕ ಪ್ರತಿಭಟಿಸಿದರು. ಸಿದ್ದರಾಮಯ್ಯ ಅವರಿದ್ದ ಕಾರನ್ನು ಅಡ್ಡಗಟ್ಟಿ ಸಾವರ್ಕರ್ ಭಾವಚಿತ್ರವನ್ನು ಕಾರಿನೊಳಕ್ಕೆ ಹಾಕಿದಲ್ಲದೇ ಕಪ್ಪು ಬಾವುಟ ಪ್ರದರ್ಶಿಸಿ `ಗೋ ಬ್ಯಾಕ್ ಸಿದ್ದುಖಾನ್, ಗೋ ಬ್ಯಾಕ್ ಸಿದ್ದರಾಮಯ್ಯ’ ಘೋಷಣೆ ಕೂಗಿದರು.

ತಿಮ್ಮಯ್ಯ ಸರ್ಕಲ್ ನಲ್ಲಿ ಸಿದ್ಧರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿದ್ದು  ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇನ್ನು ಗುಂಪು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು.

Key words: Former CM -Siddaramaiah -protest- again-bjp-kodagu

ENGLISH SUMMARY…

Former CM Siddaramaiah faces protest heat: Eggs thrown at his car, black flags flashed
Kodagu, August 18, 2022 (www.justkannada.in): Former Chief Minister and leader of the opposition in the assembly Siddaramaiah today experienced the heat of a protest when he visited Kodagu to check the condition of the rain-hit places.
Miscreants threw eggs at his car as his car reached the Timmaiah circle in Kodagu. Members of the BJP Yuvamorcha took out a demonstration against him and flashed black flags. There was an argument between the Congress and BJP activists at the place causing tension for a while.
BJP activists protested by flashing black flags at Titimathi in Ponnampet Taluk in Kodagu. A few people waylaid his car and also threw pictures of Savarkar inside his car as a token of their protest and shouted slogans, “Go back Siddukhan, Go back Siddaramaiah.”
Keywords: Former CM Siddaramaiah/ Kodagu/ black flag/ protest