ಮೈತ್ರಿ ಸರ್ಕಾರ ಬೀಳುವುದಕ್ಕೆ ಸಿದ್ದ ಔಷಧ ಕಾರಣ ಎಂಬ ಹೆಚ್.ಡಿಕೆ ಹೇಳಿಕೆ ವಿಚಾರ: ಮಾಜಿ ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ…

Promotion

ಬೆಂಗಳೂರು,ಜು,22,2020(www.justkannada.in):  ಸಮ್ಮಿಶ್ರ ಸರ್ಕಾರ ಪತನವಾಗಿ ಇಂದಿಗೆ ಒಂದು ವರ್ಷ ಹಿನ್ನೆಲೆ  ಮೈತ್ರಿ ಸರ್ಕಾರ ಬೀಳುವುದಕ್ಕೆ ಸಿದ್ದ ಔಷಧ ಕಾರಣ ಎಂಬ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹೇಳಿಕೆ  ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಅದೆಲ್ಲಾ ಮುಗಿದು ಹೋದ ಕಥೆ. ಕುಮಾರಸ್ವಾಮಿ ಈಗ ಅದನ್ನೆಲ್ಲಾ ಯಾಕೆ ನೆನಪಿಸಿಕೊಳ್ತಾರೋ ಗೊತ್ತಿಲ್ಲ  ಎಂದಿದ್ದಾರೆ.jk-logo-justkannada-logo

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,  ಸಮ್ಮಿಶ್ರ ಸರ್ಕಾರ ಹೋಯ್ತು. ಈಗ ಬಿಜೆಪಿ ಸರ್ಕಾರ ಬಂದಿದೆ.  ಈಗ ಅವರು ಯಾಕೆ ನೆನೆಪಿಸಿಕೊಂಡಿದ್ದಾರೋ ಗೊತ್ತಿಲ್ಲ, ಹೆಚ್ಡಿಕೆ ಬಗ್ಗೆ ನಾನ್ಯಾಕೆ ಮಾತಾಡಲಿ(?) ಅವರ ತಾತ್ಪರ್ಯವೆಲ್ಲಾ ನನಗೆ ಅರ್ಥವಾಗಲ್ಲ, ಅವರು ಬರೆದಿರೋ ಕನ್ನಡವೆಲ್ಲಾ ಅರ್ಥವಾಗಲ್ಲ ಎಂದು  ತಿಳಿಸಿದರು.former-cm-siddaramaiah-hd-kumaraswamy-coalition-govrnament-fell

ಕಾಂಗ್ರೆಸ್​ನವರಿಗೆ ಕೆಲಸವಿಲ್ಲವೆಂದು ಟೀಕಿಸಿದ್ದ  ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಗೆ ತಿರುಗೇಟು ನೀಡಿದ ಸಿದ್ಧರಾಮಯ್ಯ, ಪ್ರಜಾಪ್ರಭುತ್ವದಲ್ಲಿ ಲೆಕ್ಕ ಯಾರಿಗೆ ಕೊಡಬೇಕು. ಜನಪ್ರತಿನಿಧಿಗಳು ಜನರಿಗೆ ಉತ್ತರ ಕೊಡಬೇಕು.  ನಾನು ಮೂರು ಬಾರಿ ಪತ್ರ ಬರೆದಿದ್ದೀನಿ. ನನ್ನ ಪತ್ರಕ್ಕೆ ಅವರು ಉತ್ತರ ಕೊಟ್ಟಿದ್ದಾರಾ(?)  ನಿನ್ನೆ ಸಿಎಂ ಅವರು ಸುಳ್ಳನ್ನೇ ಹೇಳಿದ್ದಾರೆ. ದುಡ್ಡು ಹೊಡೆಯುವುದರಲ್ಲಿ ನಮ್ಮ ಸಹಕಾರ ಇಲ್ಲ, ಜನರ ಜೀವ ಉಳಿಸೋಕೆ ಮಾತ್ರ ನಮ್ಮ ಸಹಕಾರವಿದೆ  ತಿಳಿಸಿದರು.

 

Key words: former cm –siddaramaiah- hd kumaraswamy- coalition govrnament-fell