‘ಅಪ್ಪು’ ಗುಣಗಾನ ಮಾಡಿದ  ಮಾಜಿ ಸಿಎಂ ಸಿದ್ಧರಾಮಯ್ಯ: ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಆಗ್ರಹ.

Promotion

ಬೆಂಗಳೂರು,ನವೆಂಬರ್,16,2021(www.justkannada.in):  ನಟ ಪುನೀತ್ ರಾಜ್ ಕುಮಾರ್ ನಯ, ವಿನಯ, ಸರಳತೆ ಮೈಗೂಡಿಸಿಕೊಂಡಿದ್ದ ವ್ಯಕ್ತಿ.  ಕನ್ನಡ ನಾಡಿನ ಜನತೆಯ ಮನಸ್ಸಲ್ಲಿ ಮನೆ ಮಾಡಿದ್ಧರು. ರಾಜ್ ಕುಮಾರ್ ಅವರಿಗಿದ್ದ ಎಲ್ಲಾ ಗುಣಗಳು ಪುನೀತ್ ಗಿತ್ತು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಗುಣಗಾನ ಮಾಡಿದರು.

ಪುನೀತ್ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ಧರಾಮಯ್ಯ, ರಾಜ್ಯದ ಜನ ಕುಟುಂಬ ಸದಸ್ಯನನ್ನ ಕಳೆದುಕೊಂಡ ನೋವು, ನಾಡಿನುದ್ದಕ್ಕೂ ಇಂತಹ ಭಾವನೆ ನೋವು ವ್ಯಕ್ತವಾಗಿತ್ತು. ವಿನಯ ಸರಳತೆ ಮೈಗೂಡಿಸಿಕೊಂಡಿದ್ದ ವ್ಯಕ್ತಿ.  ಕನ್ನಡ ನಾಡಿನ ಜನತೆಯ ಮನಸ್ಸಲ್ಲಿ ಮನೆ ಮಾಡಿದ್ಧರು. ಹೀಗಾಗಿ ರಾಜ್ಯದ ಜನತೆ ಶೋಕ ಸಾಗರದಲ್ಲಿ ಮುಳುಗಿತ್ತು ನಟ ಪುನೀತ್ ರಲ್ಲಿ ರಾಜ್ ಕುಮಾರ್ ಅವರನ್ನ ಕಂಡಿದ್ದವು. ರಾಜ್ ಗಿದ್ದ ಎಲ್ಲಾ ಗುಣಗಳು ಪುನೀತ್ ಗಿತ್ತು.  ಪುನೀತ್ ಅವರ ವಿಶೇಷ ನಗು ಮರೆಯಲು ಆಗಲ್ಲ ಎಂದು ನುಡಿದರು.

ರಾಜ ಕುಮಾರ ಸಿನಿಮಾ ಬಿಡುಗಡೆಯಾಗಿತ್ತು.  ಸಿನಿಮಾ ನೋಡುವಂತೆ ಪುನೀತ್ ಹೇಳಿದ್ದರು. ಆಗ ಮೈಸೂರಿನ ಸರಸ್ವತಿ ಥಿಯೇಟರ್ ನಲ್ಲಿ ಹೋಗಿ ಸಿನಿಮಾ ವಿಕ್ಷೀಸಿದ್ದೆ ನೋಡಿದ್ದೆ. ಅಶಕ್ತ ಮಹಿಳೆಯರ ಜವಾಬ್ದಾರಿ ಹೊತ್ತಿರುವ ಕುಟುಂಬದ ಸೇವಾಕಾರ್ಯ ಶ್ಲಾಘನೀಯ ಎಂದು ಸಿದ್ಧರಾಮಯ್ಯ ಗುಣಗಾನ ಮಾಡಿದರು.

ನಟ ಪುನೀತ್ ಅವರಿಗೆ ಮರಣೋತ್ತರ ಪದ್ಮಶ್ರೀ ನೀಡಲಿ. ಸಿಎಂ ಬೊಮ್ಮಾಯಿ ಸಂಫುಟದಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಶಿಫಾರಸ್ಸು ಮಾಡಲಿ ಎಂದು ಸಿದ್ಧರಾಮಯ್ಯ ಆಗ್ರಹಿಸಿದರು.

Key words: Former CM –Siddaramaiah- actor –Punith rajkumar- Padma Shri Award