ಹೈಕಮಾಂಡ್ ನಾಯಕರ ಮಾತು ಕೇಳಿ ನನಗೆ ನೋವಾಯಿತು: ನಾನು ಸ್ಪರ್ಧೆ ಮಾಡೇ ಮಾಡುತ್ತೇನೆ ಎಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್.

Promotion

ಹುಬ್ಬಳ್ಳಿ,ಏಪ್ರಿಲ್,11,2023(www.justkannada.in):  ಬೆಳಿಗ್ಗೆ ಬಿಜೆಪಿ ಹೈಕಮಾಂಡ್ ನಾಯಕರಿಂದ ಕರೆ ಬಂದಿದ್ದು ನಿಜ. ಬೇರೆಯವರಿಗೆ ಅವಕಾಶ ಮಾಡಿಕೊಂಡಿ ಎಂದು ವರಿಷ್ಠರು ಹೇಳಿದರು. ಹೈಕಮಾಂಡ್ ನಾಯಕರ ಮಾತು ಕೇಳಿ ನನಗೆ ನೋವಾಯಿತು. ಆದರೆ  ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡೇ ಮಾಡುತ್ತೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ತಮಗೆ ಬಿಜೆಪಿ ಟಿಕೆಟ್ ಮಿಸ್ ಆಗುತ್ತಿರುವ ವಿಚಾರ ಕುರಿತು ಮಾತನಾಡಿ ಬೇಸರ ವ್ಯಕ್ತಪಡಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕಳೆದ 30 ವರ್ಷಗಳಿಂದ ನಾನು ಪಕ್ಷ ಸಂಘಟಿಸಿದ್ದೇನೆ.  ಉತ್ತರ ಕರ್ನಾಟಕದಲ್ಲಿ ಪಕ್ಷ ಕಟ್ಟಿದ್ದೇನೆ. ಶಾಸಕನಾಗಿ 6 ಬಾರಿ ಆಯ್ಕೆಯಾಗಿದ್ದೇನೆ. ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ 7ನೇ ಬಾರಿ ಆಯ್ಕೆಯಾಗುವ ವಿಶ್ವಾಸವಿದೆ.

ನಿನ್ನೆವರೆಗೆ ನನಗೆ ಬಿಜೆಪಿ ಟಿಕೆಟ್ ಕನ್ಫರ್ಮ್ ಎಂದಿದ್ದರು.  ಆದರೆ ಬೆಳಿಗ್ಗೆ ಹೈಕಮಾಂಡ್ ನಾಯಕರು ಕರೆ ಮಾಡಿ ನೀವು ಹಿರಿಯ ನಾಯಕ. ಬೇರೆಯವರಿಗೆ ಅವಕಾಶ ನೀಡಿ ಎಂದರು.   ಹೈಕಮಾಂಡ್ ನಾಯಕರ ಮಾತು ಕೇಳಿ ನನಗೆ ನೋವಾಗಿದೆ. ಜಗದೀಶ್ ಶೆಟ್ಟರ್.  ನಾನು ಮತ್ತೊಮ್ಮೆ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದು ನಿಜ . ಅತಿಹೆಚ್ಚು ಮತಗಳ ಅಂತರದಿಂದ ಗೆದ್ದು ಬರುವುದು ನಿಜ. ನಾನು ಚುನಾವಣಾ ಪ್ರಚಾರ ಆರಂಭಿಸಿದ್ದೇನೆ. ನನಗೆ ಗೆಲ್ಲುವ ಶಕ್ತಿ ಇದೆ. ಜನರ ಆಶೀರ್ವಾದವಿದೆ. ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

Key words: Former CM -Jagdish Shettar – hurt – high command- leaders- compete.