ಕಾಂಗ್ರೆಸ್ ಕಾರ್ಯಕರ್ತರಿಗೆ ಸಿದ್ದರಾಮಯ್ಯ ರೇಗಿದ ವಿಚಾರದ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯ.

Promotion

ಮೈಸೂರು,ನವೆಂಬರ್,22,2021(www.justkannada.in): ಮೈಸೂರಿನಲ್ಲಿ ಪರಿಷತ್ ಟಿಕೆಟ್ ಕೇಳಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಸಿದ್ದರಾಮಯ್ಯ ರೇಗಿದ  ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ತಮ್ಮನ್ನ ಚುನಾವಣೆಯಲ್ಲಿ ಸೋಲಿಸಿದವರನ್ನ ಅಪ್ಪಿಕೊಳ್ತಾರೆ. ಜಿಟಿ ದೇವೇಗೌಡರ ಜೊತೆ ಸಿದ್ದರಾಮಯ್ಯ ವೇದಿಕೆ ಹಂಚಿಕೊಳ್ಳುತ್ತಾರೆ. ವೇದಿಕೆ ಮೇಲೆ ಅವರನ್ನು ಅಪ್ಪಿಕೊಳ್ಳುತ್ತಾರೆ. ಆದರೆ ಪಕ್ಷಕ್ಕಾಗಿ ದುಡಿದ ಕಾಂಗ್ರೆಸ್ ಕಾರ್ಯಕರ್ತರನ್ನ ರೇಗುತ್ತಾರೆ. ಇದು ನನಗೆ ನಿಜಕ್ಕು ಸೋಜಿಗವೆನಿಸಿತು ಎಂದು ಹೆಚ್.ಡಿ ಕುಮಾರಸ್ವಾಮಿ ಲೇವಡಿ ಮಾಡಿದರು.

ನಾನು ಹೆಚ್ ಡಿ ದೇವೇಗೌಡರಾದಿಯಾಗಿ ಹಲವು ಬಾರಿ ಚುನಾವಣೆಯಲ್ಲಿ ಸೋತಿದ್ದೇವೆ. ನಾವೆಂದೂ ಕೂಡ ಪಕ್ಷದ ಕಾರ್ಯಕರ್ತರನ್ನು ಸೋಲಿಗೆ ಹೊಣೆ ಮಾಡಿಲ್ಲ. ಕಾರ್ಯಕರ್ತರನ್ನ ಸೋಲಿಸಿದ್ದೀರಿ ಎಂದು ರೇಗಾಡಿಲ್ಲ. ನಮ್ಮ ಕೆಲವು ತಪ್ಪುಗಳಿಂದ ಸೋಲುಂಟಾಗುತ್ತದೆ. ಅದಕ್ಕೆ ಕಾರ್ಯಕರ್ತರನ್ನ ದೂರುವುದು ಸರಿಯಲ್ಲ ಎಂದರು.

ಜಿಟಿ ದೇವಗೌಡ ಪಕ್ಷ ತೊರೆಯುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿಕೆ, ಈ ಕ್ಷಣದವರೆಗೂ ಜಿಟಿ ದೇವೆಗೌಡರ ನಿಲುವು ಏನು ಎಂಬುದು ಗೊತ್ತಿಲ್ಲ. ಚುನಾವಣೆ ಇನ್ನೂ ಒಂದು ವರ್ಷ ಇದೆ. ಅಲ್ಲಿಯವರೆಗೂ ನಾನು ಜಿಡಿಎಸ್ ಶಾಸಕ ಅಂತ ಹೇಳಿದ್ದಾರೆ. ರಾಜಕೀಯದಲ್ಲಿ ಏನುಬೇಕಾದರೂ ಆಗಬಹುದು. ನಾನೇನು ಅವರನ್ನು ಸಂಪರ್ಕ ಮಾಡಿಲ್ಲ ಎಂದರು.

ಸಂದೇಶ ನಾಗರಾಜ್‌ ಗೆ ಜೆಡಿಎಸ್ ಬಾಗಿಲು ಕ್ಲೋಸ್ ಆಗಿದೆ. ಅವರು ಪಕ್ಷ ಬಿಟ್ಟು ಈಗಾಗಲೇ ಮೂರು ವರ್ಷ ಕಳೆದಿದೆ. ನನ್ನನ್ನು ಅವರು ಸಂಪರ್ಕ ಮಾಡಿಲ್ಲ, ನಾನು ಮಾಡಲ್ಲ. ಇಂದು ಸಂಜೆ ಜೆಡಿಎಸ್ ಸಭೆ ಇದೆ.  ಅಲ್ಲಿ ಅಭ್ಯರ್ಥಿ ತೀರ್ಮಾನ ಆಗುತ್ತೆ. ಸಂದೇಶ ನಾಗರಾಜ್ ಬೇರೆ ಯಾರ ಜೊತೆ ಸಂಪರ್ಕ ಇದ್ದಾರೆ ಗೊತ್ತಿಲ್ಲ. ಅವರು ಯಾರನ್ನೆ ಸಂಪರ್ಕ ಮಾಡಿದರು ಅದು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.

ಸಾ.ರಾ.ಮಹೇಶ ವಿರುದ್ದ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದಾರೆ ಎಂಬ ವಿಚಾರ ಕುರಿತು ಸ್ಪಷ್ಟನೆ ನೀಡಿದ ಹೆಚ್.ಡಿ ಕುಮಾರಸ್ವಾಮಿ,  ಇದು ಊಹಾಪೋಹ ಸುದ್ದಿ. ಯಾವ ಕೆಂಡಾಮಂಡಲವೂ ಇಲ್ಲ. ಸಾ ರಾ ಮಹೇಶ್ ನನ್ನ ಸಂಬಂಧದಲ್ಲಿ ಯಾರು ಹುಳಿ ಹಿಂಡಲು ಆಗುವುದಿಲ್ಲ. ಇವೆಲ್ಲವೂ ಊಹಾಪೋಹ ಎಂದರು.

Key words: Former CM -HD Kumaraswamy -Siddaramaiah’s- sarcastic – Congress workers