ರಾಜ್ಯಪಾಲರ ಭಾಷಣ ಕುರಿತು  ಮಾಜಿ ಸಿಎಂ ಬೊಮ್ಮಾಯಿ ಟೀಕಿಸಿದ್ದು ಹೀಗೆ..

Promotion

ಬೆಂಗಳೂರು,ಫೆಬ್ರವರಿ,12,2024(www.justkannada.in):  ಇಂದಿನಿಂದ ರಾಜ್ಯವಿಧಾನ ಮಂಡಲ ಬಜೆಟ್ ಅಧಿವೇಶನ ಆರಂಭವಾಗಿದ್ದು ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಾಡಿದ ಭಾಷಣದ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

 ರಾಜ್ಯಪಾಲರ ಭಾಷಣ ನಂತರ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ನನ್ನ ರಾಜಕೀಯ ಅನುಭವದಲ್ಲಿ ಇಷ್ಟು ಸಪ್ಪೆ ನಿರಾಶೆಯ ಯಾವುದೇ ಭವಿಷ್ಯವಿಲ್ಲದ ದಿಕ್ಕು ದೆಸೆ ಇಲ್ಲದ ರಾಜ್ಯಪಾಲರ ಭಾಷಣವನ್ನು ನೋಡಿಲ್ಲ.ರಾಜ್ಯಪಾಲರ ಭಾಷಣ ಕಳೆದ 9 ತಿಂಗಳಲ್ಲಿ ರಾಜ್ಯದಲ್ಲಿ ಯಾವ ರೀತಿ ಅಭಿವೃದ್ಧಿ ಶೂನ್ಯವಾಗಿರುವಂತಹ ಒಂದು ಜನ ವಿರೋಧಿ ಸರ್ಕಾರವಿದೆ ಎಂಬುದನ್ನು ಪ್ರತಿಬಿಂಬಿಸುತ್ತಿದೆ. ಸರ್ಕಾರದ ಗ್ಯಾಂರಂಟಿ ಯೋಜನೆಗಳ ಕುರಿತು ರಾಜ್ಯಪಾಲರ ಕೈಯಲ್ಲಿ ಸರ್ಕಾರ ಬಹಳಷ್ಟು ಸುಳ್ಳು ಹೇಳಿಸಿದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಅಭಿವೃದ್ದಿ ವಿರೋಧಿ ಸರ್ಕಾರವಿದೆ.  ಒಂದೇ ಒಂದು ಅಭಿವೃದ್ದಿ ಬಗ್ಗೆ ಹೇಳಲು ಆಗಿಲ್ಲ. ಕೇಂದ್ರದ ಯೋಜನೆಗಳು ನಮ್ಮದು ಅಂತಾರೆ. ಕೇಂದ್ರದ ಅನುದಾನದ ಬಗ್ಗೆ ದಾಖಲೆ ಇದೆ ಆದರೆ ರಾಜ್ಯಪಾಲರ ಭಾಷಣದಲ್ಲಿ ಸುಳ್ಳು ಹೇಳಿಸಿದ್ದಾರೆ.

ಇಂತಹ ದುಸ್ಥಿತಿಯ ಪ್ರತಿಬಿಂಬ ಈ ರಾಜ್ಯಪಾಲರ ಭಾಷಣವಾಗಿದೆ. ಇಂತಹ ಆಡಳಿತವನ್ನು ಜನರು ಬಯಸಿಲ್ಲ.ಜನರ ವಿಶ್ವಾಸಕ್ಕೆ ತಾವು ದ್ರೋಹ ಮಾಡಿದ್ದೀರಾ. ಹತ್ತು ವರ್ಷ ಯುಪಿಎ ಸರ್ಕಾರ ಹಾಗೂ 10 ಎನ್.ಡಿ.ಎ ವರ್ಷ ಸರ್ಕಾರ ಎಷ್ಟು ಹಣ ರಾಜ್ಯಕ್ಕೆ ಅನುದಾನ ಬಂದಿದೆ ಎಂಬುದ ಕುರಿತು ಸದನದಲ್ಲಿ ಚರ್ಚಿಸಲಾಗುತ್ತದೆ ಎಂದು  ಬೊಮ್ಮಾಯಿ ತಿಳಿಸಿದರು.

Key words: former CM –Bommai- criticized – Governor’s- speech.