ಕೇಂದ್ರ ಮಾಜಿ ಸಚಿವ ದಿಲೀಪ್ ರೇಗೆ ಮೂರು ವರ್ಷ ಜೈಲು ಶಿಕ್ಷೆ…

Promotion

ನವದೆಹಲಿ,ಅಕ್ಟೋಬರ್,26,2020(www.justkannada.in): 1999ರಲ್ಲಿ ಜಾರ್ಖಾಂಡ್ ನಲ್ಲಿ ನಡೆದಿದ್ದ ಕಲ್ಲಿದ್ದಲು ಬ್ಲಾಕ್ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಜಿ ಸಚಿವ ದಿಲೀಪ್ ರೇಗೆ ಮೂರು ವರ್ಷ ಜೈಲುಶಿಕ್ಷೆ ವಿಧಿಸಿ ದೆಹಲಿ ನ್ಯಾಯಾಲಯ ಆದೇಶ ಹೊರಡಿಸಿದೆ.jk-logo-justkannada-logo

ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ದಿಲೀಪ್ ರೇ ಕಲ್ಲಿದ್ದಲು ಖಾತೆ ರಾಜ್ಯ ಸಚಿವರಾಗಿದ್ದರು. ಈ ನಡುವೆ 1999ರಲ್ಲಿ ಜಾರ್ಖಂಡ್ ಕಲ್ಲಿದ್ದಲು ಬ್ಲಾಕ್ ಹಂಚಿಕೆ ಹಗರಣದಲ್ಲಿ ದಿಲೀಪ್ ರೇ ಅವರನ್ನು ಅಪರಾಧಿ ಎಂದು ಕೋರ್ಟ್ ಘೋಷಿಸಿತ್ತು. ಆದರೆ ಶಿಕ್ಷೆ ಪ್ರಮಾಣ ಪ್ರಕಟಿಸಿರಲಿಲ್ಲ. ಇದೀಗ ಕೋರ್ಟ್ ಕೇಂದ್ರ ಮಾಜಿ ಸಚಿವ ದಿಲೀಪ್ ರೇಗೆ ಮೂರು ವರ್ಷ ಜೈಲುಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. former central minister- Dilip Ray -sentenced -three years - jail

ಜಾರ್ಖಂಡ್‌ನ ಗಿರಿದಿಹ್​ ನಲ್ಲಿರುವ ಬ್ರಹ್ಮದಿಹಾ ಕಲ್ಲಿದ್ದಲು ಬ್ಲಾಕ್ ಅನ್ನು 1999ರಲ್ಲಿ ಕ್ಯಾಸ್ಟ್ರಾನ್ ಟೆಕ್ನಾಲಜೀಸ್ ಲಿಮಿಟೆಡ್​ಗೆ ಅಕ್ರಮವಾಗಿ ಹಂಚಿಕೆ ಮಾಡಿರುವ ಪ್ರಕರಣ ಇದಾಗಿದ್ದು ಪ್ರಕರಣದಲ್ಲಿ ಕೇಂದ್ರ ಮಾಜಿ ಸಚಿವ ದಿಲೀಪ್ ರೇ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

 

Key words: former central minister- Dilip Ray -sentenced -three years – jail