ಯೂತ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ಗೊಂದಲ ಮತ್ತು ಮುಂದಿನ ಸಿಎಂ ಅಭ್ಯರ್ಥಿ ಬಗ್ಗೆ ಸಿದ್ಧರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ.

Promotion

ಮೈಸೂರು,ಜುಲೈ,1,2021(www.justkannada.in): ಯೂತ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ವಿಚಾರದಲ್ಲಿ ಗೊಂದಲ ಮತ್ತು ಮುಂದಿನ ಸಿಎಂ ಅಭ್ಯರ್ಥಿ ಚರ್ಚೆ ಬಗ್ಗೆ ಮಾಜಿ ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯಿಸಿದ್ದಾರೆ.jk

ಯೂತ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ವಿಚಾರದ ಗೊಂದಲ ಕುರಿತು ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಿದ್ಧರಾಮಯ್ಯ, ಅದಕ್ಕೂ ನನಗೂ ಯಾವುದೇ ಸಂಬಂಧ ಇರುವುದಿಲ್ಲ. ಅದೇ ಪ್ರತ್ಯೇಕವಾದ ವ್ಯವಸ್ಥೆ, ಆದರೂ ನಾನು ಸಲಹೆ ಕೊಟ್ಟಿದ್ದೆ. ಪ್ರತ್ಯೇಕ ಚುನಾವಣೆ ನಡೆದ ಮೇಲೆ ಅವರ ಆಯ್ಕೆ ಆಗಿದೆ. ಹೊಂದಾಣಿಕೆಯಿಂದ ಒಬ್ಬರನ್ನು ನೇಮಿಸಿ ಎಂದು ಹೇಳಿದ್ದೆ. ಇದರಲ್ಲಿ ನನ್ನದಾಗಲಿ ಡಿಕೆಶಿಯವರದ್ದಾಗಲಿ ಪಾತ್ರ ಇರುವುದಿಲ್ಲ. ಈ ವಿಚಾರದಲ್ಲಿ ಗೊಂದಲಗಳು ಬೇಡ ಎಂದು ಸ್ಪಷ್ಟನೆ ನೀಡಿದರು.

ಕಾಂಗ್ರೆಸ್ ನಲ್ಲಿ ಮೂಲ ವಲಸಿಗ ಎಂಬ ಪ್ರಶ್ನೆಯು ಇಲ್ಲ.

ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಯಾರು ಎಂಬ ಚರ್ಚೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಪಕ್ಷದಲ್ಲಿ ಇಂತಹ ಯಾವುದೇ ಚರ್ಚೆ ನಡೆದಿಲ್ಲ. ನನ್ನ ಡಿಕೆ ಶಿವಕುಮಾರ್ ನಡುವೆ ಯಾವುದೇ ಸಮನ್ವಯ ಸಮಿತಿ ರಚನೆ ಆಗುತ್ತಿಲ್ಲ. ಕಾಂಗ್ರೆಸ್ ನಲ್ಲಿ ಮೂಲ ವಲಸಿಗ ಎಂಬ ಪ್ರಶ್ನೆಯು ಇಲ್ಲ ಎಂದು

ಸಿಎಂ ಇಬ್ರಾಹಿಂ ಕಥೆಯನ್ನು ಹೇಳಿದ ಸಿದ್ದರಾಮಯ್ಯ. ಸೊಸೆ ಮನೆಗೆ ಬರುವವರೆಗೂ ಹೊರಗಿನವಳು. ಬಂದ ಮೇಲೆ ಸೊಸೆ ಮನೆಯವಳೆ ಆಗುತ್ತಾಳೆ.ಅದೇ ರೀತಿ ನಾನು ಹೊರಗಿನಿಂದ ಬಂದವನು. ಬಂದ ಮೇಲೆ‌ ನಾನು 5 ವರ್ಷ ಮುಖ್ಯಮಂತ್ರಿ ಆಗಿದ್ದೇನೆ ನಾನು ಮನೆಯವನೇ.. ಸಿಎಂ ಯಾರಾಗಬೇಕೆಂಬುದು ಚುನಾವಣೆ ಫಲಿತಾಂಶ ನಂತರ‌. ಶಾಸಕರು, ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇನ್ನು ಚುನಾವಣೆ ಎರಡೂವರೆ ವರ್ಷ ಇದೆ. ಈಗಲೇ ಸಿಎಂ ಅಭ್ಯರ್ಥಿ ಬಗ್ಗೆ ಮಾತುಗಳು ಇಲ್ಲ ಎಂದರು.

ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಘಟನೆ ನಡೆದು ಇಷ್ಟು ದಿನ ಆದರೂ ಸಿಎಂ ಹೋಗಿಲ್ಲ. ಅವರು ಮೂಢನಂಬಿಕೆಗೆ ಜೋತು ಬಿದ್ದಿದ್ದಾರೆ. ಅಲ್ಲಿ ಹೋದರೆ ಅಧಿಕಾರ ಹೋಗುತ್ತೇ ಅನ್ನೋ ಭಯದಲ್ಲಿದ್ದಾರೆ ಸಿಎಂ ಆದ ದಿನದಿಂದಲೂ ಅಲ್ಲಿಗೆ ಹೋಗಿಲ್ಲ. ನಾನು ಸಿಎಂ ಆದಾಗ 12 ಬಾರಿ ಚಾಮರಾಜನಗರಕ್ಕೆ ಹೋಗಿದ್ದೆ. ನಾನು 5 ವರ್ಷ ಪೂರೈಸಿದ್ದೆ. ಸಿಎಂ ಯಡಿಯೂರಪ್ಪ ಚಾಮರಾಜನಗರಕ್ಕೆ ಹೋಗಬೇಕು. ಅಲ್ಲಿನ ಜನರ ಕಷ್ಟ ಕೇಳಬೇಕು ಎಂದು ಒತ್ತಾಯಿಸಿದರು.

ಅಧಿವೇಶನ ಕರೆಯಲು ಸರ್ಕಾರಕ್ಕೆ ಭಯವಿದೆ.

ಅಧಿವೇಶನ ಕರೆಯಲು ಸರ್ಕಾರಕ್ಕೆ ಭಯವಿದೆ. ತಮ್ಮ ಬಣ್ಣ ಬಯಲಾಗುವ ಹೆದರಿಕೆ ಇದೆ. ತುರ್ತಾಗಿ ರಾಜ್ಯದಲ್ಲಿ ವಿಧಾನಸಭಾ ಅಧಿವೇಶನ ಕರೆಯಬೇಕು. ಇಂತಹ ತುರ್ತು ಪರಿಸ್ಥಿತಿಯಲ್ಲಿ ಅಧಿವೇಶನ ಕರೆಯದೆ ಇನ್ನು ಯಾವ ಸಂದರ್ಭದಲ್ಲಿ ಅಧಿವೇಶನ ಕರೆಯುತ್ತಾರೆ.?  ಎಂದು ಸಿದ್ಧರಾಮಯ್ಯ ಕಿಡಿಕಾರಿದರು.

ವಿರೋಧ ಪಕ್ಷಗಳನ್ನ ಎದುರಿಸಲು ಆಡಳಿತ ಪಕ್ಷಕ್ಕೆ ಭಯವಿದೆ. ಈಗಾಗಿಯೇ ಅಧಿವೇಶನ ಕರೆಯುತ್ತಿಲ್ಲ. ಪ್ರಜಾಪ್ರಭುತ್ವದ ಮೇಲೆ ಅವರಿಗೆ ನಂಬಿಕೆ ಇದ್ದರೆ ಅಧಿವೇಶನ ಕರೆಯಬೇಕು. ನಾನು ಈಗಲು ಆಗ್ರಹ ಮಾಡುತ್ತೇನೆ. ತುರ್ತಾಗಿ ಮುಂಗಾರು ಅಧಿವೇಶನ ಕರೆಯಿರಿ ಎಂದು ಆಗ್ರಹಿಸಿದರು.

key words:  former CM- Siddaramaiah -confusion – appointment – Youth Congress -president