ಮಾದಾಪುರ ಗ್ರಾಮದ ಬಳಿ ಬೀಡುಬಿಟ್ಟಿರುವ ಕಾಡಾನೆಗಳು: ಸಾಕಾನೆ ಬಳಸಿ ಅರಣ್ಯ ಸಿಬ್ಬಂದಿಗಳಿಂದ ಕಾರ್ಯಾಚರಣೆ…

ಮೈಸೂರು,ಮೇ,4,2019(www.justkannada.in):  ಮತ್ತೆ ಪ್ರಾಣಿ  ಮತ್ತು ಆನೆಗಳ ಸಂಘರ್ಷ ಉಂಟಾಗಿದ್ದು ಎಚ್ ಡಿ ಕೋಟೆ ತಾಲ್ಲೂಕಿನ ಮಾದಾಪುರ ಬಳಿಯ ಕುಣಿಗಲ್ ಕೆರೆ ಬಳಿ ಬೀಡು ಬಿಟ್ಟಿರುವ ಕಾಡಾನೆಗಳನ್ನ ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಎಚ್ ಡಿ ಕೋಟೆ ಮಾದಾಪುರ ಬಳಿಯ ಕುಣಿಗಲ್ ಕೆರೆ ಬಳಿ ಕಾಡಾನೆಗಳು ಬೀಡುಬಿಟ್ಟಿದ್ದು, ಮೈಸೂರಿನ ಗದ್ದಿಗೆ , ಮಾದಾಪುರ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಇಂದು ಬೆಳಿಗ್ಗೆಯಷ್ಟೇ ಮಾದಪುರ ಬಳಿ ಕೂಲಿ ಕಾರ್ಮಿಕನೊಬ್ಬನನ್ನು ಕಾಡಾನೆ ಬಲಿ ಪಡೆದಿತ್ತು.

ಈ ನಡುವೆ ನೆನ್ನೆ ಮೈಸೂರು ತಾಲ್ಲೂಕಿನ ಜಯಪುರ ಬಳಿ ಎರಡು ಕಾಡಾನೆಗಳು ಬೀಡುಬಿಟ್ಟಿದ್ದವು. ಇವುಗಳನ್ನ ಕಾಡಿಗಟ್ಟಲು ಸಾಕಾನೆಗಳನ್ನ ಬಳಸಿಕೊಳ್ಳಲಾಗಿತ್ತು. ಇದೀಗ ಮಾದಾಪುರ ಗ್ರಾಮದ ಬಳಿ ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಕಾಡಾನೆಗಳನ್ನ ಮತ್ತೆ ಕಾಡಿಗಟ್ಟಲು ಅರಣ್ಯ ಇಲಾಖೆ ಹರಸಾಹಸಪಡುತ್ತಿದೆ.

ಕಾರ್ಯಾಚರಣೆಗೆ ಸಾಕಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಕರೆಸಿಕೊಂಡಿದ್ದು, ಅಭಿಮನ್ಯು ಹಾಗೂ ಕೃಷ್ಣಾ ಆನೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

Key words: Forests –Madapur-village-elephant-Operation – Forest Staff