ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಸಚಿವ ಸಿ.ಸಿ ಪಾಟೀಲ್…

Promotion

ಚಾಮರಾಜನಗರ,ಡಿ,31,2019(www.justkannada.in): ಚಾಮರಾಜನಗರ ಜಿಲ್ಲೆಯಲ್ಲಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಅರಣ್ಯ ಸಚಿವ ಸಿ.ಸಿ ಪಾಟೀಲ್ ಭೇಟಿ ನೀಡಿ ದೇವರ ದರ್ಶನ ಪಡೆದರು.

ಚಾಮರಾಜನಗರ ಜಿಲ್ಲೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಅರಣ್ಯ ಸಚಿವ ಸಿ.ಸಿ.ಪಾಟೀಲ್ ಕುಟುಂಬ ಸಮೇತರಾಗಿ  ಭೇಟಿ ನೀಡಿ ಗೋಪಾಲನ ದರ್ಶನ ಪಡೆದರು. ದೇವಸ್ದಾನ ವತಿಯಿಂದ  ಕುಂಬಮೇಳ ಸಮೇತ  ಸಚಿವ ಸಿ.ಸಿ ಪಾಟೀಲ್ ಅವರನ್ನ ಗೋಪಾಲಸ್ವಾಮಿ ಕೃಷ್ಣ ಭಟ್ಡರು ಬರಮಾಡಿಕೊಂಡರು.

ತಾಲ್ಲೂಕು ಆಡಳಿತ ಮಂಡಳಿ ವತಿಯಿಂದ ಗುಂಡ್ಲುಪೇಟೆ ತಹಸೀಲ್ದಾರ್  ಎಮ್.ನಂಜುಂಡಯ್ಯ ಅರಣ್ಯ ಇಲಾಖೆ ವತಿಯಿಂದ ಸಿ.ಎಫ್.ಬಾಲಚಂದ್ರ ಸಚಿವರಿಗೆ ಸ್ವಾಗತ ಕೋರಿದರು.

Key words: forest minister-CC patil- Visit –chamaraj nagar-Himavad Gopalaswamy Hill