ಜನರ ಆಕ್ರೋಶಕ್ಕೆ ಮಣಿದು ನಿರ್ಧಾರ ಬದಲಿಸಿದ ಆಹಾರ ಸಚಿವ ಉಮೇಶ್ ಕತ್ತಿ….

ಬೆಂಗಳೂರು,ಫೆಬ್ರವರಿ,15,2021(www.justkannada.in): ಬೈಕ್, ಟಿವಿ, ಫ್ರಿಡ್ಜ್ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತೇವೆ ಎಂಬ ಹೇಳಿಕೆಗೆ ಜನರಿಂದ ಭಾರಿ ಆಕ್ರೋಶ ವ್ಯಕ್ತವಾದ ಹಿನ್ನೆಲೆ ತಮ್ಮ ನಿರ್ಧಾರದಿಂದ ಆಹಾರ ಸಚಿವ ಉಮೇಶ್ ಕತ್ತಿ ಹಿಂದೆ ಸರಿದಿದ್ದಾರೆ.jk

ಬಿಪಿಎಲ್ ಕಾರ್ಡ್ ನ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಹಿಂದಿನ ಮಾನದಂಡಗಳನ್ನೇ ಮುಂದುವರೆಸುತ್ತೇವೆ ಎಂದು ಆಹಾರ ಸಚಿವ ಉಮೇಶ್ ಕತ್ತಿ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಚಿವ ಉಮೇಶ್ ಕತ್ತಿ, ನಾನು ಸಚಿವನಾದ ಮೇಲೆ ಯಾವುದೇ ತಿದ್ದುಪಡಿ ಮಾಡಿಲ್ಲ. ಬಿಪಿಎಲ್ ಕಾರ್ಡ್ ನ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಹಿಂದಿನ ಮಾನದಂಡಗಳನ್ನೇ ಮುಂದುವರೆಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.Food Minister -Umesh katti-people- outrage-returns- BPL card- cancellation- order

ಬೈಕ್, ಟಿವಿ, ಫ್ರಿಡ್ಜ್ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತೇವೆ ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದರು. ಇದಕ್ಕೆ ಜನಸಾಮಾನ್ಯರಲ್ಲದೇ ಕಾಂಗ್ರೆಸ್ ನಾಯಕರು ಮತ್ತು ಸ್ವಪಕ್ಷದ ನಾಯಕರೇ ವಿರೋಧ ವ್ಯಕ್ತಪಡಿಸದಿದ್ದರು. ಇದೀಗ ಜನರ ಆಕ್ರೋಶಕ್ಕೆ ಮಣಿದಿರುವ ಸಚಿವ ಉಮೇಶ್ ಕತ್ತಿ ಬೈಕ್. ಟಿವಿ ಇದ್ಧರವರಿಗೆ ಬಿಪಿಎಲ್ ಕಾರ್ಡ್ ರದ್ದು ಆದೇಶ ವಾಪಸ್ ಪಡೆದಿದ್ದಾರೆ.

Key words: Food Minister -Umesh katti-people- outrage-returns- BPL card- cancellation- order