ಹೈಕಮಾಂಡ್ ಸೂಚಿಸಿದ್ದನ್ನ ಪಾಲನೆ ಮಾಡುವ ಪಕ್ಷ ನಮ್ಮದು: ಗೊಂದಲವಾಗಿದ್ರೆ ಸರಿಪಡಿಸುತ್ತೆ- ಕೆ.ಎಸ್ ಈಶ್ವರಪ್ಪ.

Promotion

ಬಾಗಲಕೋಟೆ,ಡಿಸೆಂಬರ್,15,2022(www.justkannada.in):  ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಅಕಸ್ಮಾತ್ ಗೊಂದಲವಾಗಿದ್ರೆ ನಮ್ಮ ಹೈಕಮಾಂಡ್ ಸರಿಪಡಿಸುತ್ತದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಸ್ ಈಶ್ವರಪ್ಪ, ನಮ್ಮ ಹೈಕಮಾಂಡ್ ಗಟ್ಟಿಯಾಗಿದೆ ಏನಾದರೂ ಗೊಂದಲವಾಗಿದ್ರೆ ನಮ್ಮ ಹೈಕಮಾಂಡ್ ಸರಿಪಡಿಸುತ್ತೆ. ಹೈಕಮಾಂಡ್ ಸೂಚಿಸಿದ್ದನ್ನ ಪಾಲನೆ ಮಾಡುವ ಪಕ್ಷ ನಮ್ಮದು.  ನಮಗೆ ಹೇಳೋರು ಕೇಳೋರು ಇದ್ದಾರೆ. ಆದರೆ ಕಾಂಗ್ರೆಸ್ ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಂ ಕಟ್ಟಿಕೊಂಡು ದೆಹಲಿಗೆ ಹೋಗಿದ್ದರು. ಸಿದ್ಧರಾಮಯ್ಯ ಡಿಕೆ ಶಿವಮಕುಮಾರ್ ತಂಡವ್ನ ಕರೆದುಕೊಂಡು ಹೋಗಿದ್ದರು.  ಎರಡು ಟೀಂ ಒಟ್ಟಾಗಿ ಕೆಲಸ ಮಾಡುವಂತೆ ಅವರ ಹೈಕಮಾಂಡ್ ಸೂಚಿಸಿತ್ತು. ಆದರೂ ಸಿದ್ದರಾಮಯ್ಯ ಪ್ರತ್ಯೇಕ ತಂಡದ ಜೊತೆ ಸಭೆ ನಡೆಸಿದ್ದರು ಎಂದರು.

ಮಾಜಿ ಸಿಎಂ ಸಿದ್ಧರಾಮಯ್ಯ ಆಡುವ ಆಟ ಬಿಜೆಪಿ ಮೇಲೆ ನಡೆಯಲ್ಲ. ರಾಜ್ಯದ ಜನರ ಮೇಲೂ ನಡೆಯಲ್ಲ. ಕಾಂಗ್ರೆಸ್ ನಲ್ಲಿ ಮಾತ್ರ ನಡೆಯುತ್ತೆ  ಬಿಜೆಪಿ ಕೆಜೆಪಿ ಒಡೆದು ಸಿದ್ಧರಾಮಯ್ಯ ಸಿಎಂ ಆದರು. ಈಗ ಕೇಂದ್ರದಲ್ಲಿ ಮೋದಿ ರಾಜ್ಯದಲ್ಲಿ ಬಿಎಸ್ ವೈ ಮತ್ತು ಬೊಮ್ಮಾಯಿ ನಾಯಕತ್ವವಿದೆ ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.

Key words: follows – High Command-Former Minister – KS Eshwarappa.