ಟೈಮ್ ಫಿಕ್ಸ್ ಮಾಡಿ ಇಷ್ಟೇ ದಿನದಲ್ಲಿ ಮೀಸಲಾತಿ ಕೊಡಬೇಕು ಅಂದ್ರೆ ಕಷ್ಟ- ಸಚಿವ ಮುರುಗೇಶ್ ನಿರಾಣಿ…

Promotion

ಬೆಂಗಳೂರು,ಫೆಬ್ರವರಿ,21,2021(www.justkannada.in):  ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ  ನೀಡುವಂತೆ ಆಗ್ರಹಿಸಿ ಸಮುದಾಯದ ಬಸವ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಮಾಡಲಾಗುತ್ತಿದ್ದು ಇಂದೇ ಮೀಸಲಾತಿ ಘೋಷಣೆ ಮಾಡುವಂತೆ ಸರ್ಕಾರಕ್ಕೆ ಒತ್ತಡ ಹಾಕಿದ್ದಾರೆ.jk

ಈ ಹಿನ್ನೆಲೆಯಲ್ಲಿ ಈ ಬಗ್ಗೆ ಮಾತನಾಡಿರುವ ಸಚಿವ ಮುರುಗೇಶ್ ನಿರಾಣಿ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುವ ಆಶಾಭಾವನೆ ಇದೆ. ಇಷ್ಟು ದಿನ ತಡೆದಿದ್ದೀರಿ. ಇನ್ನಷ್ಟು ದಿನ ಕಾಲಾವಕಾಶ ನೀಡಿ. ಟೈಮ್ ಫಿಕ್ಸ್ ಮಾಡಿ ಇಷ್ಟೇ ದಿನದಲ್ಲಿ ಮೀಸಲಾತಿ ಕೊಡಬೇಕು ಅಂದ್ರೆ ಕಷ್ಟ ಎಂದು ತಿಳಿಸಿದ್ದಾರೆ.

Fix time - reservation –panchamasali-Minister- Murugesh Nirani.
ಕೃಪೆ- internet

ಮೀಸಲಾತಿ ನೀಡುವ ಸಂಬಂಧ ಉಪಸಮಿತಿ ರಚನೆ ಮಾಡಲಾಗಿದೆ. ಆ ಸಮಿತಿಯಲ್ಲಿ ನಾನೂ ಕೂಡ ಸದಸ್ಯನಾಗಿದ್ದೇನೆ. ಆಗ ಕಾನೂನು ತೊಡಕು ಬಂದ ಹಿನ್ನೆಲೆಯಲ್ಲಿ ಪಂಚಮಸಾಲಿಗೆ ಮೀಸಲಾತಿ ನೀಡಲು ಆಗಿರಲಿಲ್ಲ ಇನ್ನು ಕೆಲದಿನಗಳ ಕಾಲ ಸಮುದಾಯಗಳು ಕಾಯಬೇಕು ಎಂದರು.

Key words: Fix time – reservation –panchamasali-Minister- Murugesh Nirani.