ಒಂದು ದಿನದ ಮಟ್ಟಿಗೆ ನಗರ ಪೊಲೀಸ್ ಆಯುಕ್ತರಾದ ಐವರು ಮಕ್ಕಳು…

Promotion

ಬೆಂಗಳೂರು,ಸೆ,9,2019(www.justkannada.  ದೊಡ್ಡ ಪೊಲೀಸ್ ಅಧಿಕಾರಿಗಳಾಗಬೇಕೆಂಬ ಆಸೆಯನ್ನ, ಕನಸನ್ನ ಹೊತ್ತ ಅನಾರೋಗ್ಯದಿಂದ ಬಳಲುತ್ತಿದ್ದ ಐವರು ಮಕ್ಕಳ ಕನಸನ್ನ ಬೆಂಗಳೂರು ನಗರ ಪೊಲೀಸರು ಈಡೇರಿಸಿದ್ದಾರೆ.

ಹೌದು ಐವರು ಮಕ್ಕಳಿಗೆ ಪೊಲೀಸ್ ಅಧಿಕಾರಿಗಳಾಗಬೇಕೆಂಬ ಕನಸಿತ್ತು. ಆದರೆ ಮಕ್ಕಳಿಗೆ ತೀವ್ರ ಅನಾರೋಗ್ಯ ಕಾಡುತ್ತಿತ್ತು. ಹೀಗಾಗಿ ಐವರು ಮಕ್ಕಳ ಕನಸನ್ನ ಬೆಂಗಳೂರು ನಗರ ಪೊಲೀಸರು ಈಡೇರಿಸಿದ್ದಾರೆ. ಒಂದು ದಿನದ ಮಟ್ಟಿಗೆ ಅನಾರೋಗ್ಯಪೀಡಿತ ಐವರು ಮಕ್ಕಳು ಪೊಲೀಸ್ ಆಯುಕ್ತರಾಗಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವಕಾಶ ನೀಡಿದರು.

ಮೇಕ್ ಎ ವಿಶ್ ಫೌಂಡೇಷನ್ ಗೆ ನಗರ ಪೊಲೀಸರು ಸಾಥ್ ನೀಡಿದರು. ಹೀಗಾಗಿ ಐವರು ಮಕ್ಕಳು ಖಾಗಿ ತೊಟ್ಟು ಒಂದು ದಿನದ ಮಟ್ಟಿಗೆ ಪೊಲೀಸ್ ಅಧಿಕಾರಿಗಳಾದರು.

Key words: Five children –bangalore- city -police commissioner -one day.