ಮೊದಲ ಅಲೆ ಇಷ್ಟೊಂದು ತೀವ್ರತೆ ಇರಲಿಲ್ಲ: ಟಫ್ ರೂಲ್ಸ್ ನಿಂದ ಕೊರೋನಾ ಕಂಟ್ರೋಲ್ – ಸಚಿವ ಸುಧಾಕರ್…

Promotion

ಬೆಂಗಳೂರು,ಏಪ್ರಿಲ್,24,2021(www.justkannada.in):  ಕೊರೋನಾ ಮೊದಲ ಅಲೆ ಇಷ್ಟೊಂದು ತೀವ್ರತೆ ಇರಲಿಲ್ಲ. ವೈರಸ್ ನಮ್ಮ ಜತೆ ಚೆಸ್ ರೀತಿ ಆಟವಾಡುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.jk

ಕೊರೋನಾ ನಿಯಂತ್ರಣಕ್ಕಾಗಿ ಈಗಾಗಲೇ ರಾಜ್ಯದಲ್ಲಿ ನೈಟ್ ಕರ್ಫ್ಯೂ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಕೊರೋನಾ ಹೊಸ ಅಲೆ ಬಗ್ಗೆ ಮಾತನಾಡಿದ ಸಚಿವ ಸುಧಾಕರ್, ಟಫ್ ರೂಲ್ಸ್ ನಿಂದ ಕರೋನಾ ಕಂಟ್ರೋಲ್ ಸಾಧ್ಯ.  ಈಗಾಗಲೇ 500 ಟನ್ ಆಕ್ಸಿಜನ್ ಬಳಕೆ ಮಾಡಿದ್ದೇವೆ. ಮೇ ತಿಂಗಳಲ್ಲಿ 1414 ಟನ್ ಆಕ್ಸಿಜನ್ ಬೇಕು. ಇದಕ್ಕಾಗಿ ಸಿಎಂ ಬಿಎಸ್ ವೈ ಪ್ರಧಾನಿ ಮೋದಿ ಅವರ ಬಳಿ ಮನವಿ ಮಾಡಿದ್ದಾರೆ ಎಂದರು. first wave - not – intense-  Corona -Control - Tough Rules-Minister-Sudhakar.

ಕಳೆದ ಬಾರಿ ಹೆಚ್ಚು ಆಕ್ಸಿಜನ್ ಬೇಕಾಗಿರಲಿಲ್ಲ. ಈ ಬಾರಿ ಕೊರೋನಾ ವೈರಸ್ ವೈದ್ಯಲೋಕಕ್ಕೆ ಸವಾಲಾಗಿದೆ.  ಇನ್ನು ಬೆಂಗಳೂರಿನಲ್ಲಿ ಹೆಚ್ಚುವರಿಯಾಗಿ 2ಸಾವಿರ ಐಸಿಯು ವೆಂಟಿಲೇಟರ್ ಬೇಕಿದೆ. ವ್ಯವಸ್ಥೆ ಮಾಡಲಾಗುತ್ತದೆ ಎಂದು ಸುಧಾಕರ್ ತಿಳಿಸಿದರು.

Key words: first wave – not – intense-  Corona -Control – Tough Rules-Minister-Sudhakar.