ಫೆ.8 ರಂದು ಮೈಸೂರು ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಮೊದಲ ಲೋಕ್ ಅದಾಲತ್…

Promotion

ಮೈಸೂರು,ಜ,21,2020(www.justkannada.in): ಫೆಬ್ರವರಿ 8 ರಂದು ಮೈಸೂರು ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಮೊದಲ ಲೋಕ್ ಅದಾಲತ್ ನಡೆಯಲಿದ್ದು ರಾಜಿಯಾಗುವಂತಹ  ಪ್ರಕರಣಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಗುತ್ತದೆ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಎಸ್.ಕೆ.ಒಂಟಿಗೋಡಿ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಟ್ಟಡದ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಎಸ್.ಕೆ.ಒಂಟಿಗೋಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ 2020ನೇ ವರ್ಷದಲ್ಲಿ 5 ಲೋಕ್ ಅದಾಲತ್ ನಡೆಸಲಾಗುತ್ತದೆ. ಮೊದಲ ಲೋಕ್ ಅದಾಲತ್ ಫೆಬ್ರವರಿ 8 ರಂದು ನಡೆಯಲಿದ್ದು, ರಾಜಿಯಾಗಬಲ್ಲ ಎಲ್ಲಾ ಕ್ರಿಮಿನಲ್ ಪ್ರಕರಣಗಳು, ಸಿವಿಲ್ ಪ್ರಕರಣಗಳು, ಅಪಘಾತ ಪ್ರಕರಣಗಳು, ಕೌಟುಂಬಿಕ ಪ್ರಕರಣ, ಜೀವನಾಂಶ ಪ್ರಕರಣಗಳನ್ನ ಸ್ಥಳದಲ್ಲೇ  ಇತ್ಯರ್ಥ ಪಡಿಸಲಾಗುತ್ತದೆ ಎಂದು ತಿಳಿಸಿದರು.

ಕಾನೂನು ಸಲಹೆ ಮತ್ತು ನೆರವು ಪಡೆದುಕೊಳ್ಳುವ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಕಾನೂನು ಸೇವೆಗಳ ಅಗತ್ಯತೆ ಇದ್ದವರು ಲೋಕ್ ಅದಾಲತ್ ನಲ್ಲಿ ಭಾಗಿಯಾಗುವಂತೆ ಎಸ್.ಕೆ.ಒಂಟಿಗೋಡಿ ಮನವಿ ಮಾಡಿದರು.

Key words: First- Lok Adalat – Mysore- District –Taluk- Courts – 8th Feb