ಆನ್ ಲೈನ್ ಫ್ಲಾಟ್ ಫಾರಂನಲ್ಲಿ ರಿಲೀಸ್’ಗೆ ಕನ್ನಡ ಚಿತ್ರ ರೆಡಿ !

Promotion

ಬೆಂಗಳೂರು, ಜೂನ್ 26, 2020 (www.justkannada.in): ಕನ್ನಡ ಚಿತ್ರ ‘ಲಾ’ ಈಗ ಜುಲೈ 17 ರಂದು ಅಮೆಜಾನ್ ಪ್ರೈಮ್ ನಲ್ಲಿ ಪ್ರದರ್ಶನಗೊಳ್ಳಲಿದೆ.

ಈ ಮೂಲಕ ಕನ್ನಡ ಚಿತ್ರ ಮೊದಲ ಬಾರಿಗೆ ಆನ್ ಲೈನ್ ಫ್ಲಾಟ್ ಫಾರಂನಲ್ಲಿ ರಿಲೀಸ್ ಆಗುತ್ತಿದೆ. ಕ್ರೈಮ್-ಥ್ರಿಲ್ಲರ್ ಕಥೆ ಹೊಂದಿರುವ ಈ ಚಿತ್ರದ ಟೀಸರ್ ಅನ್ನು ಅಮೆಜಾನ್ ಪ್ರೈಮ್ ಕೂಡ ಇಂದು ಪ್ರಕಟಿಸಿದೆ.

ನಟಿ ರಾಗಿಣಿ ಪ್ರಜ್ವಲ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ತನ್ನ ಮಾರ್ಗದರ್ಶಕರ ಸಹಾಯದಿಂದ ಕಾನೂನು ವ್ಯವಸ್ಥೆಯ ವಿರುದ್ಧ ಹೋರಾಡುವ ಈ ಚಲನಚಿತ್ರವು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಟದ ಕಥೆಯಾಗಿದೆ.