ಮೈಸೂರು ಜಿಲ್ಲೆಯಲ್ಲಿ ಮೊದಲ ದಿನವೇ  634 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಗೈರು.

Promotion

ಮೈಸೂರು,ಮಾರ್ಚ್,28,2022(www.justkannada.in): ಮೈಸೂರು ಜಿಲ್ಲೆಯಲ್ಲಿ ಮೊದಲ ದಿನವೇ  634 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಗೈರಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಡಿಡಿಪಿಐ ರಾಮಚಂದ್ರ ರಾಜೇ ಅರಸ್, 36,151  ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಬೇಕಿತ್ತು  ಅದರಲ್ಲಿ 35,517 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 634 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು. ಪುನರಾವರ್ತಿತ ಹಾಗೂ ಖಾಸಗಿಯಾಗಿ ಪರೀಕ್ಷೆ ಕಟ್ಟಿದವರ ಮಾಹಿತಿ ಲಭ್ಯವಾಗಿಲ್ಲ.Engineering –students-' dissatisfaction – VTU- decision-postpone- exams

ಪರೀಕ್ಷೆಗೆ ಗೈರಾದವರ ಬಗ್ಗೆ ಶಿಕ್ಷಣ ಇಲಾಖೆ  ಮಾಹಿತಿ ಕಲೆ ಹಾಕುತ್ತಿದ್ದು,  ಯಾವ ಕಾರಣಕ್ಕೆ ಪರೀಕ್ಷೆಗೆ ಬಂದಿಲ್ಲ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಡಿಡಿಪಿಐ ರಾಮಚಂದ್ರ ರಾಜೇ ಅರಸ್ ತಿಳಿಸಿದರು.

Key words: first day -Mysore district- 634 students – SSLC exam.