ಪಟಾಕಿ ಮಾರಾಟಗಾರರಿಗೆ ತೊಂದರೆ ಆಗುತ್ತೆ ನಿಜ, ಆದ್ರೆ ಜನ ಬದುಕಬೇಕಲ್ಲ- ಸಚಿವ ವಿ.ಸೋಮಣ್ಣ

ಬೆಂಗಳೂರು,ನವೆಂಬರ್,6,2020(www.justkannada.in):  ಕೊರೋನಾ ಹಿನ್ನೆಲೆ ಈ ಬಾರಿ ದೀಪಾವಳಿ ವೇಳೆ ಪಟಾಕಿ ಮಾರಾಟ ಮತ್ತು ಪಟಾಕಿ ಸಿಡಿಸುವುದಕ್ಕೆ ಸರ್ಕಾರ ನಿಷೇಧ ಹೇರಿದ್ದು ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ವಿ.ಸೋಮಣ್ಣ, ಈ ಬಾರಿ ದೀಪಾ ಹಚ್ಚಿ ದೀಪಾವಳಿ ಆಚರಿಸಿ ಎಂದು ಸಲಹೆ ನೀಡಿದ್ದಾರೆ.jk-logo-justkannada-logo

ಈ ಕುರಿತು ಇಂದು ಮಾಧ್ಯಮಗಳಿಗೆ ಮಾತನಾಡಿದ ಸಚಿವ ವಿ.ಸೋಮಣ್ಣ, ಪಟಾಕಿ ನಿಷೇಧಿಸಿರುವ ಸಿಎಂ ನಿರ್ಧಾರಕ್ಕೆ ಸ್ವಾಗತಿಸುತ್ತೇನೆ. ಆರೋಗ್ಯ ದೃಷ್ಠಿಯಿಂದ ಪಟಾಕಿ ನಿಷೇಧ ಮಾಡಲಾಗಿದೆ. ಬಹಳ ಕಷ್ಟಪಟ್ಟು ಕೊರೋನಾ ಕಂಟ್ರೋಲ್ ಮಾಡಿದ್ದೀವಿ. ಪಟಾಕಿ ನಿಷೇಧದಿಂದ ಪಟಾಕಿ ಮಾರಾಟಗಾರರಿಗೆ ತೊಂದರೆಯಾಗುತ್ತದೆ ನಿಜ. ಆದರೆ ಜನ ಬದುಕಬೇಕಲ್ಲ. ಹೀಗಾಗಿ ಪಟಾಕಿ ಮಾರಾಟಗಾರರು, ವಿತರಕರು ಇದನ್ನ ಸಹಿಸಿಕೊಳ್ಳಲಿ ಎಂದು ಮನವಿ ಮಾಡಿದರು.fireworks –ban-vendors –depavali- Minister- V. Somanna.

ಹಾಗೆಯೇ ಸರ್ಕಾರದ ನಿಯಮಗಳನ್ನ ಜನರು ಪಾಲಿಸಿ. ಪಟಾಕಿ ಹಚ್ಚುವ ಬದಲು ಈ ಬಾರಿ ದೀಪ ಹಚ್ಚಿ ದೀಪಾವಳಿ ಆಚರಿಸಿ ಎಂಧು ವಿ.ಸೋಮಣ್ಣ ಸಲಹೆ ನೀಡಿದರು.

Key words:  fireworks –ban-vendors –depavali- Minister- V. Somanna.