ಕೊರೊನಾ ನಿವಾರಣೆಗೆ ಹೋಮ: ಬೆಳಗಾವಿ ಬಿಜೆಪಿ ಶಾಸಕ ಬಿಟ್ಟು ನಾಲ್ವರ ವಿರುದ್ಧ ಎಫ್ಐಆರ್

Promotion

ಬೆಳಗಾವಿ, ಮೇ 30,2021 (www.justkannada.in): ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಅಭಯ ಪಾಟೀಲ್ ಓಣಿ ಓಣಿಗಳಲ್ಲಿ ಹೋಮ ಮಾಡಿಸಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದರು.

ಆದರೀಗ ಶಾಸಕರನ್ನು ಹೊರತುಪಡಿಸಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ ಪೊಲೀಸರು. ಇದಕ್ಕೆ ತೀವ್ರ ವಿರೋಧ ಕೇಳಿ ಬಂದಿದೆ.

ಹೋಮ ಮಾಡಿಸಿದ ನಾಲ್ವರ ವಿರುದ್ಧ ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿ ಮಹಾನಗರ ಪಾಲಿಕೆ ಕಿರಿಯ ಆರೋಗ್ಯ ನಿರೀಕ್ಷಕರ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆಯಲ್ಲಿ 50 ಕಡೆಗಳಲ್ಲಿ ಕೋವಿಡ್ ನಿವಾರಣೆಗಾಗಿ ಹಾಗೂ ವಾತಾವರಣ ಶುದ್ಧಿಗಾಗಿ ಹೋಮ ಮಾಡಿಸಿದ್ದರು.