ತಜ್ಞರ ವರದಿ ಬಳಿಕ ಶಾಲೆ ಆರಂಭದ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ- ಶಿಕ್ಷಣ ಸಚಿವ ಸುರೇಶ್ ಕುಮಾರ್.

kannada t-shirts

ಬೆಂಗಳೂರು,ಜುಲೈ,22,2021(www.justkannada.in):  ತಜ್ಞರ ವರದಿ ಬಂದ ಬಳಿಕ ಚರ್ಚಿಸಿ ಶಾಲೆ ಆರಂಭದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.jk

ಶಾಲೆ ಪುನಾರಂಭದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಸದ್ಯಕ್ಕೆ ಶಾಲೆ ಆರಂಭವಿಲ್ಲ. ಇನ್ನೆರೆಡು ದಿನಗಳಲ್ಲಿ ತಜ್ಞರ ವರದಿ ನಮ್ಮ ಕೈ ಸೇರಲಿದೆ. ಬಳಿಕ ಶಾಲೆ ಆರಂಭದ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಕೊರೋನಾ 2ನೇ ಅಲೆ ಹಿನ್ನೆಲೆ ಶಾಲಾ ಕಾಲೇಜುಗಳು ಬಂದ್ ಆಗಿದ್ದು ಇದೀಗ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾದ ಬೆನ್ನಲ್ಲೆ ಶಾಲಾ ಕಾಲೇಜುಗಳ ಆರಂಭಕ್ಕೆ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಮಧ್ಯೆ  ಈಗಾಗಲೇ ಪದವಿ ಕಾಲೇಜುಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು ಜುಲೈ 26ರಿಂದ ಪದವಿಕಾಲೇಜುಗಳು ಪುನಾರಂಭಗೊಳ್ಳಲಿವೆ.

ENGLISH SUMMARY…

Final decision on opening schools after receiving expert opinion: Education Minister Suresh Kumar
Bengaluru, July 22, 2021 (www.justkannada.in): Primary and Secondary Education Minister S. Suresh Kumar has informed that a final decision on the opening of schools will be taken after receiving the experts’ report and discussions.
Responding to the questions of reopening of schools Suresh Kumar informed that schools will not be opened as of now. “However we will receive the experts’ report within two days. We will discuss with the experts and arrive at a final decision,” he said.
The government is contemplating the opening of schools and colleges following a decrease in the number of COVID-19 cases. Permission has already been given to open degree colleges from July 26.
Keywords: Reopening/ schools/ colleges/ Education Minister S. Suresh Kumar/ experts report/ discussion

Key words: Final decision – opening – school – experts-report – Education Minister -Suresh Kumar

website developers in mysore