ನಾಳಿನ ಕರ್ನಾಟಕ ಬಂದ್ ಗೆ ಫಿಲ್ಮಂ  ಚೇಂಬರ್ ಬೆಂಬಲ: ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ.

Promotion

ಬೆಂಗಳೂರು,ಸೆಪ್ಟಂಬರ್,28,2023(www.justkannada..in):  ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ ನಾಳೆ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಫಿಲ್ಮಂ ಚೇಂಬರ್ ಬೆಂಬಲ ವ್ಯಕ್ತಪಡಿಸಿದೆ.

ಈ ಸಂಬಂಧ ಇಂದು ನಟ ಶಿವರಾಜ್ ಕುಮಾರ್ ನಿವಾಸಕ್ಕೆ ಫಿಲ್ಮಂ ಚೇಂಬರ್ ಎಂ.ಎನ್ ಸುರೇಶ್ ಮತ್ತು ತಂಡ ಭೇಟಿ ನೀಡಿ  ಬೆಂಬಲ ಕೋರಿದ್ದಾರೆ.  ನಟ ಶಿವರಾಜ್ ಕುಮಾರ್ ಅವರ ಭೇಟಿ ಬಳಿಕ ಮಾತನಾಡಿದ ಅವರು, ನಾಳಿನ ಕರ್ನಾಟಕ ಬಂದ್ ಗೆ ಫಿಲ್ಮಂ ಚೇಂಬರ್ ಬೆಂಬಲ ಇದೆ.  ಕರ್ನಾಟಕ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದೇವೆ.

ನಾಳೇ ಶಿವಣ್ಣ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾರೆ. ನಾಳೆ ಶಿವಣ್ಣನ ನೇತೃತ್ವದಲ್ಲಿ ಪ್ರತಿಭಟನೆ ಮಾಡುತ್ತೇವೆ  ಎಂದು ಎಂ.ಎನ್ ಸುರೇಶ್ ತಿಳಿಸಿದ್ದಾರೆ.

Key words: Film Chamber- supports- tomorrow- Karnataka bandh: Protest – actor Shivanna.