ಪರಿಶೀಲನಾ ಹಂತದಲ್ಲಿ ಕೃಷಿ ವಿಶ್ವವಿದ್ಯಾಲಯಗಳಲ್ಲಿನ ಎಐಸಿಆರ್‌ ಪಿ ಹುದ್ದೆಗಳ ಭರ್ತಿ.

Promotion

ಬೆಳಗಾವಿ,ಡಿಸೆಂಬರ್,24,2021(www.justkannada.in): ರಾಜ್ಯದ ನಾಲ್ಕು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳಲ್ಲಿನ ಕೇಂದ್ರಗಳು / ಕೃಷಿ ಸಂಶೋಧನಾ ಕೇಂದ್ರಗಳಲ್ಲಿನ  ಖಾಲಿಯಿರುವ ಎ.ಐ.ಸಿಆರ್.ಪಿ ಹುದ್ದೆಗಳ ಭರ್ತಿ ವಿಚಾರ ಪರಿಶೀಲನಾ ಹಂತದಲ್ಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮೇಲ್ಮನೆಗೆ ಸ್ಪಷ್ಟಪಡಿಸಿದ್ದಾರೆ.

ಪದವೀಧರ ಕ್ಷೇತ್ರದ ಸದಸ್ಯ ಎಸ್.ವಿ.ಸಂಕನೂರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿರುವ ಸಚಿವ ಬಿ.ಸಿ.ಪಾಟೀಲ್, ಎ.ಐ.ಸಿ.ಎ.ಆರ್‌.ಪಿ ನಿಂದ ಶೇ .100 ರಷ್ಟು ಅನುದಾನಿತ ಕೆವಿಕೆಯಲ್ಲಿ ಖಾಲಿ ಇರುವ 49 ಬೋಧಕರ ಹಾಗೂ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವಂತೆ ಎಲ್ಲಾ ನಾಲ್ಕು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳಿಗೆ ನಿರ್ದೇಶಿಸಲಾಗಿದೆ.

ಅಲ್ಲದೇ ಬೆಂಗಳೂರು ಮತ್ತು ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳಿಂದ ಪುಸ್ತಾವನೆಯು ಸ್ವೀಕೃತವಾಗಿದ್ದು , ಇದನ್ನು ಪರಿಶೀಲಿಸಲಾಗುತ್ತಿದೆ . 4 ರಾಜ್ಯದಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳಲ್ಲಿ ಖಾಲಿಯಿರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ನೇರ ನೇಮಕಾತಿಯಿಂದ ಭರ್ತಿ ಮಾಡುವ ಕುರಿತು ಪರಿಷ್ಕೃತ ಪುಸ್ತಾವನೆಗಳು ಸಹ ಪರಿಶೀಲನೆಯ ಹಂತದಲ್ಲಿದೆ ಎಂದು ಸಚಿವ ಬಿ.ಸಿ ಪಾಟೀಲ್ ತಿಳಿಸಿದ್ದಾರೆ.

Key words: Filling – AICRP- vacancies – Agricultural Universities –under- review

ENGLISH SUMMARY..

Recruitment of AICRP posts in Agri Varsities in verification stage
Belagavi, December 24, 2021 (www.justkannada.in): “Recruitment for the posts of AICRP that are vacant in various Centers / Agricultural Research Centers of the four Agricultural Varsities in the State is in the verification stage,” opined Agriculture Minister B.C. Patil.
Minister B.C. Patil was answering a starred question asked by Graduates Constituency member S.V. Sankanura. In his answer, he said that directions are given to recruit eligible candidates for all the 49 posts of teaching and non-teaching staff that are vacant in the Krishi Vignan Kendras that have 100% aid from AICRP.
He also informed that proposals have been received from the Agriculture Universities in Bengaluru and Dharwad and are being verified. “The revised proposals regarding recruitment of all the vacant posts in the four Agricultural varsities of the state are also under verification,” he informed.
Keywords: Agriculture Minister/ B.C. Patil/ Agricultural varsities/ recruitment