ಬೆಂಗಳೂರಿನಲ್ಲಿ ಅಂಗಡಿ ಹಾಕುವ ವಿಚಾರಕ್ಕೆ ಜಗಳ: ವ್ಯಕ್ತಿ ಬರ್ಬರ ಹತ್ಯೆ…

Promotion

ಬೆಂಗಳೂರು,ಮೇ,15,2019(www.justkannada.in):  ಅಂಗಡಿ ಹಾಕುವ ವಿಚಾರಕ್ಕೆ ಜಗಳವಾಗಿ ದುಷ್ಕರ್ಮಿಗಳು ವ್ಯಾಪಾರಿಯೊಬ್ಬರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಗರದ ಕೆ.ಆರ್ ಮಾರುಕಟ್ಟೆ ಬಳಿ ಈ ಘಟನೆ ನಡೆದಿದೆ. ಭರತ್ ಹತ್ಯೆಯಾದ ವ್ಯಕ್ತಿ. ಪುಟ್ ಬಾತ್ ಮೇಲೆ ಅಂಗಡಿ ಹಾಕುವ ವಿಚಾರಕ್ಕೆ ಭರತ್ ಮತ್ತು ಶರವಣ ಇಬ್ಬರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಈ ಹಿಂದೆ ಪೊಲೀಸರು ಇಬ್ಬರನ್ನು ಕರೆಸಿ ಬುದ್ದಿವಾದ ಹೇಳಿದ್ದರು.

ಈ ನಡುವೆ ನಿನ್ನೆ ರಾತ್ರಿ ಇದೇ ವಿಚಾರಕ್ಕೆ ಶರವಣ ಮತ್ತು ಭರತ್ ನಡುವೆ ಜಗಳವಾಗಿದೆ. ಈ ಸಂದರ್ಭದಲ್ಲಿ ಶರವಣ ತನ್ನ ಸಹಚರರನ್ನ ಕರೆದುಕೊಂಡು ಬಂದು ಭರತ್ ನನ್ನ ಮಾರಕಾಸ್ತ್ರಗಳಿಂದ ಕೊಲೆ ಮಾಡಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಕುರಿತು ಕೆ.ಆರ್ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Fight – shop- Bangalore- murder