ಫೆ.24 ರಂದು ಮೇಯರ್ ಯಾರಾಗ್ತಾರೆಂದು ಕಾದು ನೋಡಿ- ಶಾಸಕ ತನ್ವೀರ್ ಸೇಠ್…..

Promotion

ಮೈಸೂರು,ಫೆಬ್ರವರಿ,19,2021(www.justkannada.in): ನಾವು ಹಗಲು ಹೊತ್ತಿನಲ್ಲಿ ರಾಜಕೀಯ ಮಾಡುವವರು. ರಾತ್ರಿ ರಾಜಕಾರಣ ಮಾಡುವವರು  ನಗರಪಾಲಿಕೆಯೆ ಬೇಡ ಎನ್ನುತ್ತಿದ್ದಾರೆ. ಫೆಬ್ರವರಿ 24 ರಂದು ಮೇಯರ್ ಯಾರಾಗುತ್ತಾರೆ ಎಂದು ಕಾದು ನೋಡಿ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ.jk

ಮೈಸೂರು ಪಾಲಿಕೆ‌ ಮೇಯರ್ ಚುನಾವಣೆ ವಿಚಾರ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ತನ್ವೀರ್ ಸೇಠ್,  ನಾಳೆ ಸಿದ್ದರಾಮಯ್ಯ ನೇತೃತ್ವದಲ್ಲಿ ಪಾಲಿಕೆ ಸದಸ್ಯರ ಸಭೆ ನಡೆಯಲಿದೆ. ನಾವು ಕೋಮುವಾದ ಶಕ್ತಿಯನ್ನು ದೂರ ಇಡಲು ಮುಂದಾಗಿದ್ದೇವೆ. ಇದಕ್ಕಾಗಿ ಜಾತ್ಯಾತೀತರು ಸೇರಿ ಅಧಿಕಾರ ಹಿಡಿಯುತ್ತೇವೆ ಎಂದರು.

ನಾವು ಹಗಲು ಹೊತ್ತಿನಲ್ಲಿ ರಾಜಕೀಯ ಮಾಡುವವರು. ರಾತ್ರಿ ರಾಜಕಾರಣ ಮಾಡುವವರು ನಗರಪಾಲಿಕೆಯೆ ಬೇಡ ಎನ್ನುತ್ತಿದ್ದಾರೆ. ಫೆಬ್ರವರಿ 24 ರಂದು ಮೇಯರ್ ಯಾರಾಗುತ್ತಾರೆ ಎಂದು ಕಾದು ನೋಡಿ. ಈಗಾಗಲೇ ವರಿಷ್ಠರ ಜೊತೆ ಚರ್ಚೆ ಮಾಡಲಾಗಿದೆ. ಜೆ.ಡಿ.ಎಸ್ ನವರು ಕೂಡ ವರಿಷ್ಠರ ಜೊತೆ ಚರ್ಚೆ ನಡೆಸಿದ್ದಾರೆ. ನಮಗೆ ದೇವೆಗೌಡರ ಮೇಲೆ ಅಪಾರ ಗೌರವ ಇದೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.feb 24-mysore-Mayor-election-MLA -Tanveer Sait

ದೇಣಿಗೆ ಕೊಟ್ಟವರ ಮನೆಯನ್ನು ಗುರುತು ಮಾಡುವುದು ಸರಿಯಲ್ಲ….

ಇನ್ನು ನೀವು ದೇಣಿಗೆ ಕೊಟ್ಟಿದ್ದೀರಾ ಎಂಬ ಪ್ರಶ್ನೆಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಉತ್ತರಿಸಿದ ಶಾಸಕ ತನ್ವೀರ್ ಸೇಠ್. ದೇಣಿಗೆ ದಾನ ಧರ್ಮ ಕೊಡುವುದು ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು. ನಾನು ದೇವರ ಬಗ್ಗೆ ಅಪಾರ ನಂಬಿಕೆ ಇಟ್ಟಿದ್ದೇವೆ. ನಾವು ಮಾಡುವ ಒಳ್ಳೆಯ ಕೆಲಸಗಳೇ ಕಾಪಾಡುತ್ತವೆ. ದೇಣಿಗೆ ಕೊಟ್ಟವರ ಮನೆಯನ್ನು ಗುರುತು ಮಾಡುವುದು ಸರಿಯಲ್ಲ. ಈ ರೀತಿಯ ಕೆಲಸವನ್ನ ಮಾಡಬಾರದು. ಲೆಕ್ಕ ವಿಚಾರದಲ್ಲಿ ಸರಿಯಾದ ಲೆಕ್ಕಕೊಡಬೇಕು. ಪಿಎಂ ಕೇರ್ ಬಗ್ಗೆ ಯಾವುದೇ ಲೆಕ್ಕವಿಲ್ಲ. ದೇಣಿಗೆ ಉದ್ದೇಶ ಸರಿಯಾಗಿ ಬಳಸಬೇಕು ಎಂದರು.

ENGLISH SUMMARY…

Wait and see who becomes Mayor on Feb. 24: MLA Tanveer Sait
Mysuru, Feb. 19, 2021 (www.justkannada.in): “We are people who do politics in the daytime. The City Corporation itself is saying no to people who do night politics. Wait and see who becomes the Mayor on Feb. 24,” said Congress MLA Tanveer Sait.
Speaking to the media persons today in Mysuru regarding the Mysore City Corporation Mayoral elections MLA Tanveer Sait said that the Corporators’ meeting would be held under the leadership of Congress leader Siddaramaiah. “We are committed to keeping away the communal forces from power. Therefore we will form power by joining hands with the JDS,” he added.Wait and see who becomes Mayor on Feb. 24: MLA Tanveer Sait Mysuru, Feb. 19, 2021 (www.justkannada.in): "We are people who do politics in the daytime. The City Corporation itself is saying no to people who do night politics. Wait and see who becomes the Mayor on Feb. 24," said Congress MLA Tanveer Sait. Speaking to the media persons today in Mysuru regarding the Mysore City Corporation Mayoral elections MLA Tanveer Sait said that the Corporators' meeting would be held under the leadership of Congress leader Siddaramaiah. "We are committed to keeping away the communal forces from power. Therefore we will form power by joining hands with the JDS," he added. "Wait till February 24 and see who becomes the Mayor. JDS leaders also have already discussed this with our leaders. We have a lot of respect for H.D.Devegowda," he added. Keywords: Congress MLA Tanveer Sait/ MCC Mayoral elections/ JDS
“Wait till February 24 and see who becomes the Mayor. JDS leaders also have already discussed this with our leaders. We have a lot of respect for H.D.Devegowda,” he added.
Keywords: Congress MLA Tanveer Sait/ MCC Mayoral elections/ JDS

Key words: feb 24-mysore-Mayor-election-MLA -Tanveer Sait