ಹಳೆಯ ಸಂದೇಶಗಳನ್ನು ಹುಡುಕಲು ವಾಟ್ಸ್ಆಪ್’ನಿಂದ ಫೀಚರ್ !

Promotion

ಬೆಂಗಳೂರು, ನವೆಂಬರ್ 10, 2023 (www.justkannada.in): ಹಳೆಯ ಸಂದೇಶಗಳನ್ನು ಹುಡುಕಲು ವಾಟ್ಸ್ಆಪ್ ಹೊಸ ಫೀಚರ್ ಅನ್ನು ಪರಿಚಯಿಸುತ್ತಿದೆ.

ಹೌದು, ಹುಡುಕಲು ಬಯಸುವ ಸಂದೇಶಕ್ಕೆ ಸಂಬಂಧಿಸಿದ ಯಾವುದೇ ಕೀವರ್ಡ್ ಅನ್ನು ಸ್ಕ್ರೋಲ್ ಮಾಡುವ ಮೂಲಕ ಅಥವಾ ನಮೂದಿಸುವ ಮೂಲಕ ನೀವು ಹಳೆಯ ಸಂದೇಶಗಳನ್ನು ಕಂಡುಹಿಡಿಯಬಹುದಾಗಿದೆ.

ಈ ಹೊಸ ವೈಶಿಷ್ಟ್ಯದ ಸಹಾಯದಿಂದ ಬಳಕೆದಾರರು ದಿನಾಂಕದ ಸಹಾಯದಿಂದ ಹಳೆಯ ಸಂದೇಶಗಳನ್ನು ಕಂಡುಹಿಡಿಯಬಹುದು. ಪ್ರಸ್ತುತ ಪರೀಕ್ಷೆಯ ಹಂತದಲ್ಲಿರುವ ಈ ವೈಶಿಷ್ಟ್ಯವು ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ.

ದಿನಾಂಕ, ತಿಂಗಳು, ವರ್ಷದ ಆಧಾರದ ಮೇಲೆ ನಿಮಗೆ ಬೇಕಾದ ಸಂದೇಶವನ್ನು ನೀವು ಹುಡುಕಬಹುದು. ಧ್ವನಿ ಸಂದೇಶಗಳ ಜೊತೆಗೆ ಪಠ್ಯ ಸಂದೇಶಗಳು ಸಹ ಗೋಚರಿಸುತ್ತವೆ. ಈ ಸೇವೆ ಶೀಘ್ರದಲ್ಲೇ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ.