ಲಂಚ ಸ್ವೀಕರಿಸುವಾಗ ಎಫ್ ಡಿಎ ಲೋಕಾಯುಕ್ತ ಬಲೆಗೆ.

Promotion

ಮಡಿಕೇರಿ,ನವೆಂಬರ್,23,2022(www.justkannada.in):  ಮಡಿಕೇರಿಯಲ್ಲಿ ಲಂಚಸ್ವೀಕರಿಸುತ್ತಿದ್ದ ವೇಳೆ ಪ್ರದಮ ದರ್ಜೆ ಸಹಾಯಕಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಎಫ್ ಡಿಎ ಲತಾ ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದವರು. ಸಬ್ಸಿಡಿ ಕಾರು ಮಂಜುರಾತಿಗೆ 10% ಲಂಚ ಕೇಳಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಲತೀಫ್ ಎಂಬುವವರು  ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಈ ಮಧ್ಯೆ ಲೋಕಾಯುಕ್ತ ಅಧಿಕಾರಿಗಳು ಇಂದು ದಾಳಿ ನಡೆಸಿದ್ದು  ಲಂಚ ಪಡೆಯುವಾಗ ಎಫ್ ಡಿಎ ಲತಾ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

Key words:  FDA- Lokayukta- trap – accepting- bribes.