ಫಾಸಿಲ್ ಹತ್ಯೆ ಪ್ರಕರಣ: ಐವರು ಪ್ರಮುಖ ಆರೋಪಿಗಳು ಅರೆಸ್ಟ್

Promotion

ಬೆಂಗಳೂರು, ಜುಲೈ 31, 2022 (www.justkannada.in): ಸುರತ್ಕಲ್ ನಲ್ಲಿ ಫಾಸಿಲ್ ಹತ್ಯೆಗೈದ ಐವರು ಪ್ರಮುಖ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಹಂತಕರು ಬಳಸಿದ್ದ ಕಾರ್ ಮಾಲೀಕ ಅಜಿತ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಜುಲೈ 28ರಂದು ಸುರತ್ಕಲ್ ನಲ್ಲಿ ಹತ್ಯೆ ಮಾಡಲಾಗಿತ್ತು. ಅಜಿತ್ ವಿಚಾರಣೆ ವೇಳೆ ಮಾಹಿತಿ ಕಲೆಹಾಕಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ವಿಚಾರಗೊಳಪಡಿಸಿದ್ದಾರೆ

ಹಂತಕರು ಬಳಸಿದ್ದ ಕಾರ್ ಮಾಲೀಕ ಅಜಿತ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅಜಿತ್ ಬಾಡಿಗೆ ಕಾರ್ ಬಿಟ್ಟಿದ್ದು, ಆತನ ಕಾರ್ ನಲ್ಲಿ ದುಷ್ಕರ್ಮಿಗಳು ಬಂದಿದ್ದರು ಎನ್ನಲಾಗಿದೆ.