ರೈತರಿಗೆ ಕನಿಷ್ಟ 75 ಸಾವಿರ ರೂ. ಪರಿಹಾರ ಘೋಷಿಸುವಂತೆ ಸರ್ಕಾರಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಗ್ರಹ…

Promotion

ಕೋಲಾರ,ಮೇ,24,2021(www.justkannada.in):  ಸಂಕಷ್ಟದಲ್ಲಿರುವ ರೈತರಿಗೆ ಕನಿಷ್ಟ 75 ಸಾವಿರ ರೂ. ಪರಿಹಾರ ಘೋಷಿಸಿ. ಆಗ ರೈತರು ಸುಧಾರಿಸಿಕೊಳ್ಳಲು ಆಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಗ್ರಹಿಸಿದರು.jk

ಕೋಲಾರದಲ್ಲಿ ಇಂದು ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ರೈತರ ಸಮಸ್ಯೆಗಳ ಬಗ್ಗೆ ಯಾರೂ ಸಹ ಸೌಜನ್ಯಕ್ಕೂ ಕೇಳುತ್ತಿಲ್ಲ. ರಾಜ್ಯ ಸರ್ಕಾರ ರೈತರಿಗೆ ಸಹಾಯ ಧನ ಘೋಷಣೆ ಮಾಡಿದೆ. ಪರಿಹಾರದ ಅರ್ಥ ಏನೆಂದು ಗೊತ್ತಿದೆಯಾ,? ರೈತರನ್ನ ಭಿಕ್ಷುಕರಂತೆ ಕಾಣುತ್ತಿದ್ದೀರಿ. ರೈತರನ್ನ ಇಷ್ಟೊಂದು ತುಚ್ಛವಾಗಿ ಕಾಣಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದ್ದರೆ ಪರಿಹಾರವನ್ನ ಕೊಡಬೇಡಿ. ಪರಿಹಾರವನ್ನ ಬೇರೆ ಕಾರ್ಯಕ್ಕೆ ಬಳಸಿಕೊಳ್ಳಿ  ರೈತರು ಹೇಗೆ ತಮ್ಮ ಜೀವನ ಸಾಗಿಸುತ್ತಾರೆ.  ನಿಮಗೆ ಆರ್ಥೈಸಿಕೊಳ್ಳಲು ಆಗುತ್ತಿಲ್ಲ. ನಾನು ಇದನ್ನ ದುರಹಂಕಾರದಿಂದ ಹೇಳುತ್ತಿಲ್ಲ. ರೈತರಿಗೆ ಕನಿಷ್ಟ 75 ಸಾವಿರ ರೂ ಪರಿಹಾರ ಘೋಷಿಸಿ. ಇದರಿಂದ ಅವರು ಸುಧಾರಿಸಿಕೊಳ್ಳುತ್ತಾರೆ. ನಾನು ಇದನ್ನು ಬೇಜವಾಬ್ದಾರಿಯಿಂದ ಹೇಳುತ್ತಿಲ್ಲ. 1 ಎಕರೆ ಟಮೋಟೊ ಬೆಳೆಯಲು 2 ಲಕ್ಷ ರೂ ಖರ್ಚಾಗುತ್ತದೆ. ಹೀಗಾಗಿ ರೈತರ ಸಮಸ್ಯೆಯನ್ನ ಅರಿತು ಹೇಳುತ್ತಿದ್ದೇನೆ ಎಂದರು.farmers-75-thosend-compensation-former-speaker-ramesh-kumar-demands

ನಾವು ಅಸಹಾಯಕರಾಗಿದ್ದೇವೆ. ಹೋರಾಟಕ್ಕೆ ಅವಕಾಶವಿಲ್ಲ. ಆದರೂ ಜವಾಬ್ದಾರಿಯಿಂದ ಹಿಂದೆ ಸರಿಯಲ್ಲ ಎಂದು ರಮೇಶ್ ಕುಮಾರ್ ತಿಳಿಸಿದರು.

Key words: Farmers-75 thosend- compensation-Former Speaker -Ramesh Kumar -demands