“ಸಾಲದ ಶೂಲ, ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ”

Promotion

ಮೈಸೂರು,ಮಾರ್ಚ್,21,2021(www.justkannada.in) : ಸಾಲಬಾಧೆ ಹಿನ್ನೆಲೆ ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ.

jkಪಿರಿಯಾಪಟ್ಟಣ ತಾಲೂಕಿನ ಕಾನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ರೈತ ಚಲುವೇಗೌಡ(69) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಶರಣಾದ ರೈತರಾಗಿದ್ದಾರೆ.

ಪತ್ನಿ ಮತ್ತು  ಚಲುವೇಗೌಡ  ಜಂಟಿ  ಖಾತೆಯಲ್ಲಿ 5 ಎಕರೆ 7 ಗುಂಟೆ ಕೃಷಿ ಜಮೀನಿದ್ದು, ತಂಬಾಕು ಮತ್ತು ಶುಂಠಿ ಬೆಳೆಯುತ್ತಿದ್ದರು. ಇದಕ್ಕಾಗಿ ಪಿರಿಯಾಪಟ್ಟಣದ  ಬ್ಯಾಂಕ್ ಆಫ್ ಬರೋಡದಲ್ಲಿ 8 ಲಕ್ಷ ರೂ. ಸಾಲ ಮತ್ತು ಕೈ ಸಾಲ ಮಾಡಿದ್ದರು.

Farmer-suicide-debt-sterilization

ಬೆಳೆ ವಿಫಲಗೊಂಡ ಹಿನ್ನೆಲೆ ಸಾಲ ತೀರಿಸಲಾಗದೆ ಚಲುವೇಗೌಡ ಮನನೊಂದಿದ್ದರು. ಪಂಪ್‌ಸೆಟ್ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿದ್ದ ಚಲುವೇಗೌಡ ಅವರನ್ನು ಸ್ಥಳೀಯರು ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

key words : Farmer-suicide-debt-sterilization