ಗೂಂಡಾ ಕಾಯ್ದೆ ಅಡಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಪುತ್ರನ  ಬಂಧನಕ್ಕೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ಆಗ್ರಹ.

Promotion

ಮೈಸೂರು,ಅಕ್ಟೋಬರ್,4,2021(www.justkannada.in):  ಉತ್ತರಪ್ರದೇಶದಲ್ಲಿ ಪ್ರತಿಭಟನಾನಿರತ ರೈತರ ಸಾವು ಹಿನ್ನೆಲೆ ಘಟನೆಯನ್ನ  ಕರ್ನಾಟಕ ರಾಜ್ಯ ಕಬ್ಬು ಬೆಳಗಾರರ ಸಂಘ ಖಂಡಿಸಿದ್ದು ಘಟನೆಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅವರ ಪುತ್ರನೇ ನೇರ ಕಾರಣ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿರುವ ರೈತಮುಖಂಡ ಕುರುಬೂರು ಶಾಂತಕುಮಾರ್, ಅಧಿಕಾರದ ಮದದಲ್ಲಿ ಬಿಜೆಪಿ ಗೂಂಡಾವರ್ತನೆ ಮಾಡುತ್ತಿದೆ. ಕೂಡಲೇ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರನ್ನ ಸಂಪುಟದಿಂದ ವಜಾ ಮಾಡಬೇಕು. ಗೂಂಡಾಕಾಯ್ದೆ ಅಡಿ ಕೇಂದ್ರ ಗೃಹ ಖಾತೆ ರಾಜ್ಯಸಚಿವರ ಪುತ್ರನನ್ನು ಬಂಧಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.special-package-announcement-cm-bs-yeddyurappa-farmer-leader-kuruburu-shanthakumar

ನಿನ್ನೆ ಉತ್ತರಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿದ ಘಟನೆ ನಡೆದಿದ್ದು ಘಟನೆಯ ವೇಳೆ ಕೇಂದ್ ಗೃಹ ಖಾತೆ ರಾಜ್ಯ ಸಚಿವ ಅಜಯ್​ ಕುಮಾರ್​ ಮಿಶ್ರಾ ಅವರ ಪುತ್ರ ಇದ್ದರು ಎನ್ನಲಾಗದೆ.

Key words: Farmer leader- Kurubur Shanthakumar –demands- arrest – Union Home Minister’s- son