ರೈತಗೀತೆ ಹಾಡುವ ವೇಳೆಯಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಅವರನ್ನ ನೆನೆದು ಕಣ್ಣೀರಿಟ್ಟ ಪತ್ನಿ ಸುನಿತಾ ಪುಟ್ಟಣ್ಣಯ್ಯ….

Promotion

ಮೈಸೂರು,ಫೆಬ್ರವರಿ,18,2021(www.justkannada.in):  ರೈತ ನಾಯಕ ದಿ. ಕೆ.ಎಸ್.ಪುಟ್ಟಣ್ಣಯ್ಯ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ರೈತಗೀತೆ ಹಾಡುವ ವೇಳೆಯಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಅವರನ್ನ ನೆನೆದು ಪತ್ನಿ ಸುನಿತಾ ಪುಟ್ಟಣ್ಣಯ್ಯ ಕಣ್ಣೀರಿಟ್ಟ ಘಟನೆ ನಡೆಯಿತು.jk

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೆ.ಎಸ್.ಪುಟ್ಟಣ್ಣಯ್ಯ ನೆನಪು ಮತ್ತು ರಾಜ್ಯ ಮಟ್ಟದ ಸಮಾರಂಭವನ್ನ ನಗರದ ಕಲಾಮಂದಿರದಲ್ಲಿ  ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗಣ್ಯರಿಂದ ಸಂಘದ ನೂತನ ಹೆಸರು, ಲೋಗೋ ಹಾಗೂ ಹಸಿರು ಶಾಲು ಬಿಡುಗಡೆ ಮಾಡಲಾಯಿತು.

ಕೆ.ಎಸ್.ಪುಟ್ಟಣ್ಣಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ರೈತ ಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇನ್ನು ಕಾರ್ಯಕ್ರಮದಲ್ಲಿ ರೈತಗೀತೆ ಹಾಡುವ ವೇಳೆಯಲ್ಲಿ  ಕೆಎಸ್ ಪುಟ್ಟಣ್ಣಯ್ಯ ಅವರನ್ನ ನೆನೆದು  ಕೆ.ಎಸ್ ಪುಟ್ಟಣ್ಣಯ್ಯ  ಅವರ ಪತ್ನಿ ಸುನಿತಾ ಪುಟ್ಟಣ್ಣಯ್ಯ ಕಣ್ಣೀರಿಟ್ಟರು.

ಇನ್ನು ಕಾರ್ಯಕ್ರಮದಲ್ಲಿ ಕೆ.ಎಸ್ ಪುಟ್ಟಣ್ಣಯ್ಯ ಅವರ ಒಡನಾಟ ಹಾಗೂ ವಿಚಾರಧಾರೆಗಳನ್ನ ರೈತ ಮುಖಂಡರು ಸ್ಮರಿಸಿದರು.  ಇದೇ ಸಂದರ್ಭದಲ್ಲಿ ಸಂಘದ ಮುಖವಾಣಿ ನೇಗಿಲ ಹಾಡು ಮಾಸ ಪತ್ರಿಕೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿವಿಧ ಜಿಲ್ಲೆಯ ನೂರಾರು ರೈತರು, ಕೆಎಸ್ಪಿ ಅಭಿಮಾನಿಗಳು ಭಾಗಿಯಾಗಿದ್ದರು.

 farmer leader- KS Puththannaya – wife- Sunita Puttannayya-mysore
ಕೃಪೆ- internet

ಕಾರ್ಯಕ್ರಮದಲ್ಲಿ ಬಡಗಲಪುರ ನಾಗೇಂದ್ರ, ಸುನಿತಾ ಪುಟ್ಟಣ್ಣಯ್ಯ, ಚಾಮರಸ ಮಾಲೀ ಪಾಟೀಲ್, ಕೃಷಿ ಆರ್ಥಿಕ ತಜ್ಞ ಡಾ. ಸಿ. ಎನ್. ಪ್ರಕಾಶ್ ಕಮ್ಮರಡಿ ಸೇರಿದಂತೆ ರೈತ ಸಂಘದ ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದ ಪದಾಧಿಕಾರಿಗಳು ಸೇರಿದಂತೆ ಕೆಎಸ್ ಪುಟ್ಟಣ್ಣಯ್ಯ ಕುಟುಂಬಸ್ಥರು ಭಾಗಿಯಾಗಿದ್ದರು.

Key words: farmer leader- KS Puththannaya – wife- Sunita Puttannayya-mysore